ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಜೆ ಘೋಷಣೆ: ಶಾಲಾ ಕಾಲೇಜುಗಳಲ್ಲಿ ಗೊಂದಲ!

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೂ ಒಂದು ದಿನದ ರಜೆ ಘೋಷಿಸಿತ್ತು. ಆದರೆ ಕೆಲ ಶಾಲೆಗಳು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೂ ಒಂದು ದಿನದ ರಜೆ ಘೋಷಿಸಿತ್ತು. ಆದರೆ ಕೆಲ ಶಾಲೆಗಳು ಪೋಷಕರಿಗೆ ಮಾಹಿತಿ ನೀಡುವುದು ವಿಳಂಬವಾದ ಹಿನ್ನೆಲೆಯಲ್ಲಿ ಹಲವೆಡೆ ಗೊಂದಲ ಉಂಟಾಗಿತ್ತು.
ಪೋಷಕರು ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯಕ್ಕೆ ಸರಿಯಾಗಿ ರಜೆ ಘೋಷಣೆ ಖಚಿತವಾಗಿತ್ತು,ಆದರೆ ಕೆಲವು ಶಾಲೆಗಳು ಬೆಳಗ್ಗೆ 8 ಗಂಟೆಗೆ ಆರಂಭವಾಗುತ್ತವೆ. ರಜೆಯ ವಿಷಯ ಆನ್ ಲೈನ್ ನಲ್ಲಿ ಹರಿದಾಡುಪತ್ತಿತ್ತು. ಅಧಿಕೃತವಾಗಿ 8.15ಕ್ಕೆ ರಜೆ ಘೋಷಣೆ ಮಾಡಲಾಯಿತು. 8.30 ಕ್ಕೆ ಆರಂಭವಾಗುವ ಶಾಲೆಗಳು ಪೋಷಕರಿಗೆ ಎಸ್ ಎಂ ಎಸ್ ಮೂಲಕ ಸಂದೇಶ ಕಳುಹಿಸಿದವು.ಕೆಲವು ಮಕ್ಕಳಿಗೆ ಶಾಲೆ ತಲುಪಿದ ನಂತರ ರಜೆಯ ವಿಷಯ ತಿಳಿಯಿತು,
ಹಲವು ಶಾಲಾ ಮಕ್ಕಳು ಮಧ್ಯಾಹ್ನ ತಮ್ಮ ಪೋಷಕರು ಕರೆದುಕೊಂಡು ಹೋಗಲು ಬರುವವರೆಗೂ ಕಾಯಬೇಕಾಯಿತು, ನಾನು ನನ್ನ ಮಗಳನ್ನು ಶಾಲೆಗೆ ಬಿಟ್ಟು ಕಚೇರಿ ತಲುಪಿದ ಕೆಲ ಹೊತ್ತಿಗೆ ರಜೆಯ ವಿಷಯ ತಿಳಿಯಿತು. ಹೀಗಾಗಿ ಆತಂಕಗೊಂಡು, ಅರ್ಧ ದಿನ ರಜೆ ತೆಗೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದಾಗಿ ತಾಯಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರಜೆ ಘೋಷಿಸಿದ್ದರು ಕೆಲ ಶಾಲೆಗಳು ಮುಚ್ಚಿರಲಿಲ್ಲ. ಕೆಲ ಪೋಷಕರು ತಮ್ಮ ಮಕ್ಕಳನ್ನು ಅದಾಗಲೇ  ಶಾಲೆಗೆ ಬಿಟ್ಟು, ತಮ್ಮ ಕಚೇರಿಗೆ ತೆರಳಿದ್ದರು, ಹೀಗಾಗಿ ಅಂತಹ ಮಕ್ಕಳಿಗಾಗಿ ಶಾಲೆ ತೆರೆಯಲಾಗಿತ್ತು.
ಇನ್ನೂ ಕೆಲವು ಶಾಲಾ ಕಾಲೇಜುಗಳು ಸರ್ಕಾರಿ ಆದೇಶವಿದ್ದರೂ ಎಂದಿನಂತೆ ತರಗತಿ ನಡೆಸಿದವು. ರಜೆ ನೀಡಬೇಕೆ ಬೇಡವೇ ಎಂಬುದು ಆಡಳಿತ ಮಂಡಳಿ ವಿವೇಚನೆಗೆ ಬಿಟ್ಟದ್ದು,. ನಾವು ಶ್ರದ್ಧಾಂಜಲಿ ಸೂಚಿಸಿ ತರಗತಿಗಳನ್ನು ಮುಂದುವರಿಸಿದ್ದೇವೆ. ತರಗತಿಗಳನ್ನು ಸಸ್ಪೆಂಡ್ ಮಾಡಬೇಕೆಂಬ ಯಾವುದೇ ಆದೇಶವಿಲ್ಲ ಎಂದು ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com