ಕೊಡಗು ಸಹಿತವಾಗಿ ರಾಜ್ಯದ ವಿವಿಧ ಭಾಗದಲ್ಲಿ ಮಹಾಮಳೆಗೆ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟವಾಗಿತ್ತು. ಕೊಡಗಿನ ವಿವಿಧ ಭಾಗದಲ್ಲಿ ಭೂ ಕುಸಿತದಿಂದ ಜೀವ ಹಾನಿ, ಮನೆ, ಜಮೀನು ಸಂಪೂರ್ಣ ನಾಶವಾಗಿತ್ತು. ಇದೆಲ್ಲದಕ್ಕೂ ಪರಿಹಾರ ಕೋರಿ ಆಗಸ್ಟ್ ತಿಂಗಳಲ್ಲಿ ಕೇಂದ್ರಕ್ಕೆ ವಿಸ್ತೃತ ಪ್ರಸ್ತಾವನೆ ರಾಜ್ಯದಿಂದ ಸಲ್ಲಿಸಲಾಗಿತ್ತು.