ಬೆಂಗಳೂರು; ನೆಲಮಂಗಲದ ಮಠದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ, ಕೇಸು ದಾಖಲು

ನೆಲಮಂಗಲ ಸಮೀಪ ದಾಬಸ್ ಪೇಟೆಯಲ್ಲಿರುವ ವಂಕಲ ಮಠದ ಆವರಣದಲ್ಲಿ ಭಕ್ತೆಯೊಬ್ಬರ ಮೇಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೆಲಮಂಗಲ ಸಮೀಪ ದಾಬಸ್ ಪೇಟೆಯಲ್ಲಿರುವ ವಂಕಲ ಮಠದ ಆವರಣದಲ್ಲಿ ಭಕ್ತೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ 38 ವರ್ಷದ ಬಸವ ರಮಾನಂದ ಸ್ವಾಮಿಗಳ ಮೇಲೆ ಕೇಳಿಬಂದಿದೆ.

ಈ ಬಗ್ಗೆ ಮಹಿಳೆ ದೂರು ನೀಡಿದ್ದಾರೆ. ಅದಕ್ಕೆ ಸ್ವಾಮೀಜಿ ಕೂಡ ಪ್ರತಿ ದೂರು ನೀಡಿದ್ದಾರೆ.ಮತ್ತೊಬ್ಬ ಸ್ವಾಮೀಜಿ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಘಟನೆ ಕಳೆದ ಮಾರ್ಚ್ ತಿಂಗಳಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಈಗಾಗಲೇ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ಕೋರ್ಟ್ ದೂರಿನ ಆಧಾರದ ಮೇಲೆ ದಾಬಸ್ ಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,

ಬಾಗಲಕೋಟೆ ಮೂಲದ ಮಹಿಳೆ ತನ್ನ ಪತಿ ಬಿಟ್ಟುಹೋದ ಮೇಲೆ ಹಣಕಾಸಿನ ತೊಂದರೆಗೆ ಒಳಗಾಗಿದ್ದಳು. ತನ್ನ ಕಷ್ಟ ಹೇಳಿಕೊಂಡು ಮಾರ್ಚ್ ತಿಂಗಳಲ್ಲಿ ಮಹಿಳೆ ರಮಾನಂದ ಸ್ವಾಮೀಜಿ ಬಳಿ ಹೋಗಿದ್ದಳು. ಆಗ ಮಠದಲ್ಲಿ ಸ್ವಾಮೀಜಿ ಇರಲಿಲ್ಲ. ಸ್ವಾಮೀಜಿಯ ಮೊಬೈಲ್ ನಂಬರ್ ಪಡೆದುಕೊಂಡು ತನ್ನೂರಿಗೆ ಹಿಂತಿರುಗಿದ್ದಳು.

ಮರುದಿನ ಕರೆ ಮಾಡಿದಾಗ ಸ್ವಾಮೀಜಿ ಮಠಕ್ಕೆ ಬರುವಂತೆ ಹೇಳಿದ್ದಾರೆ. ಮಠಕ್ಕೆ ಸಾಯಂಕಾಲ ಹೊತ್ತು ಹೋಗಿ ತನಗೊಂದು ಉದ್ಯೋಗ ಕೊಡಿಸುವಂತೆ ಕೇಳಿಕೊಂಡಳು. ಕೋಣೆಯಲ್ಲಿದ್ದ ಸ್ವಾಮೀಜಿ ಪಕ್ಕದ ಕೋಣೆಗೆ ಹೋಗಿ ಮೊಬೈಲ್ ತರುವಂತೆ ಆಕೆಗೆ ಸೂಚಿಸಿದರು. ಹಿಂದಿನಿಂದ ಆಕೆಯನ್ನು ಹಿಂಬಾಲಿಸಿದ ಸ್ವಾಮೀಜಿ ಬಾಗಿಲು ಮುಚ್ಚಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ಕೊನೆಗೆ ಹೇಗೊ ತಪ್ಪಿಸಿಕೊಂಡು ಬಂದ ಮಹಿಳೆ ಮಠದಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸ್ವಾಮೀಜಿ ಆಕೆಗೆ ತನ್ನ ಸಹಾಯಕಳಾಗಿ ಮಠದಲ್ಲಿ ಕೆಲಸ ಮಾಡುವಂತೆ ಮತ್ತು ಆಕೆಗೆ ವಸತಿ ಸೌಲಭ್ಯ ನೀಡುವುದಾಗಿ ಕೂಡ ಭರವಸೆ ನೀಡಿದ್ದರು. ಆದರೆ ಮಹಿಳೆ ಒಪ್ಪಲಿಲ್ಲ. ಅಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸಹಾಯದಿಂದ ನೆಲಮಂಗಲದಲ್ಲಿರುವ ಸಂಬಂಧಿಕರ ಮನೆ ಸೇರಿಕೊಂಡಳು.

ಮಠದಲ್ಲಿ ನಡೆದ ಘಟನೆಯನ್ನು ಯಾರಿಗೂ ಹೇಳಬಾರದು, ಹೇಳಿದರೆ ಜೀವಕ್ಕೆ ಅಪಾಯ ನೀಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದರಂತೆ. ಸ್ವಾಮೀಜಿ ಬೆದರಿಕೆಗೆ ಹೆದರಿ ಕೇಸು ದಾಖಲಿಸಲು ವಿಳಂಬ ಮಾಡಿದೆ ಎನ್ನುತ್ತಾರೆ ಮಹಿಳೆ.

ಆದರೆ ರಮಾನಂದ ಸ್ವಾಮೀಜಿ, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಮದುಮಯಾನಂದ ಸ್ವಾಮೀಜಿಗಳ ಜೊತೆ ಸೇರಿ ತಮ್ಮ ವಿರುದ್ಧ ಪಿತೂರಿ ನಡೆಸಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com