ಮೈಸೂರಿನಿಂದ ಚೆನ್ನೈಗೆ ಎರಡೂವರೆ ಗಂಟೆ ರೈಲು ಪ್ರಯಾಣ; ಜರ್ಮನ್ ಸರ್ಕಾರದಿಂದ ಯೋಜನಾ ಪ್ರಸ್ತಾವನೆ

ಮೈಸೂರು ಮತ್ತು ಚೆನ್ನೈ ಮಧ್ಯೆ ಅಧಿಕ ವೇಗದ ರೈಲು ಸಂಪರ್ಕ ಜಾಲಕ್ಕೆ ರೈಲ್ವೆ ಮಂಡಳಿಯ ಒಪ್ಪಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೈಸೂರು ಮತ್ತು ಚೆನ್ನೈ ಮಧ್ಯೆ ಅಧಿಕ ವೇಗದ ರೈಲು ಸಂಪರ್ಕ ಜಾಲಕ್ಕೆ ರೈಲ್ವೆ ಮಂಡಳಿಯ     ಒಪ್ಪಿಗೆ ಸಿಕ್ಕಿದರೆ 2030ರ ಹೊತ್ತಿಗೆ ಎರಡೂ ನಗರಗಳ ಪ್ರಯಾಣದ ಅವಧಿ 5 ಗಂಟೆಗೂ ಅಧಿಕ ಸಮಯ ಕಡಿಮೆಯಾಗಲಿದೆ. ಜರ್ಮನ್ ಸರ್ಕಾರ ಈ ಉದ್ದೇಶಿತ ರೈಲು ಸಂಪರ್ಕ ಯೋಜನೆಗೆ ಪ್ರಸ್ತಾವನೆ ನೀಡಿದೆ.

435 ಕಿಲೋ ಮೀಟರ್ ಉದ್ದದ ಸಾಧ್ಯತಾ ಅಧ್ಯಯನ ವರದಿಯನ್ನು ಜರ್ಮನ್ ರಾಯಭಾರಿ ಮಾರ್ಟಿನ್ ನೈ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹನಿ ಅವರಿಗೆ ಸಲ್ಲಿಸಿದ್ದಾರೆ. ಪ್ರತಿ ಗಂಟೆಗೆ 320 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಚಲಿಸುವ ರೈಲು ಇದಾಗಿದ್ದು 435 ಕಿಲೋ ಮೀಟರ್ ತಲುಪಲು ಈಗ ಬೇಕಾಗಿರುವ 7 ಗಂಟೆಯಿಂದ 2 ಗಂಟೆ 20 ನಿಮಿಷಕ್ಕೆ ಇಳಿಯಲಿದೆ.

ಅಧ್ಯಯನವನ್ನು ಆರಂಭಿಸಿ ಅದಕ್ಕೆ ಹಣ ಹಾಕಿದ್ದು ಜರ್ಮನ್ ಸರ್ಕಾರವೇ. ಸಂಚಾರ ದಟ್ಟಣೆ ನಿಯಂತ್ರಿಸಲು ಕೂಡ ಈ ರೈಲ್ವೆ ಮಾರ್ಗ ಸೂಕ್ತ ಎಂದು ಹೇಳಲಾಗುತ್ತಿದೆ. ಯೋಜನೆ ಜಾರಿಗೆ ಬರಲು ಅಂದಾಜು ಸುಮಾರು 1 ಲಕ್ಷ ಕೋಟಿ ಅಗತ್ಯವಿದ್ದು 150 ಕೋಟಿ ರೂಪಾಯಿ ಹೆಚ್ಚುವರಿ ಖರ್ಚು ತಗುಲಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಚೆನ್ನೈ-ಅರಕ್ಕೊನಮ್-ಬೆಂಗಳೂರು-ಮೈಸೂರು ಮಾರ್ಗ ಶೇಕಡಾ 85ರಷ್ಟು ಎಲೆವೇಟೆಡ್ ಮತ್ತು ಶೇಕಡಾ 11ರಷ್ಟು ಸುರಂಗ ಮಾರ್ಗವನ್ನು ಹೊಂದಿದೆ. ಇಲ್ಲಿ ಮಾರ್ಗವಾಗಿ ಸಂಚಾರ ಆರಂಭವಾದರೆ ಚೆನ್ನೈ ಮತ್ತು ಬೆಂಗಳೂರು ಮಧ್ಯೆ 1 ಗಂಟೆ 40 ನಿಮಿಷ ಪ್ರಯಾಣ ಅವಧಿ ಕಡಿಮೆಯಾಗಲಿದೆ ಹಾಗೂ ಬೆಂಗಳೂರು ಮತ್ತು ಮೈಸೂರು ನಡುವೆ 40 ನಿಮಿಷ ಕಡಿಮೆಯಾಗಲಿದೆ ಎಂದು ಅಶ್ವನಿ ಲೊಹನಿ ಹೇಳುತ್ತಾರೆ.

ದೆಹಲಿ-ಮುಂಬೈ, ಮುಂಬೈ-ಚೆನ್ನೈ, ದೆಹಲಿ-ಕೋಲ್ಕತ್ತಾ, ದೆಹಲಿ-ನಾಗ್ಪುರ ಮತ್ತು ಮುಂಬೈ-ನಾಗ್ಪುರ ಮಧ್ಯೆ ಸಹ ಸಾಧ್ಯತಾ ಅಧ್ಯಯನಗಳನ್ನು ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com