ಮಂಡ್ಯ ಬಸ್ ದುರಂತ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ 30 ಮಂದಿ ಜಲಸಮಾಧಿಯಾಗಿದ್ದು, ತಮ್ಮ ಪ್ರೀತಿ ಪಾತ್ರರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ...
ಮಂಡ್ಯ ಬಸ್ ದುರಂತ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮಂಡ್ಯ ಬಸ್ ದುರಂತ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೈಸೂರು: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ 30 ಮಂದಿ ಜಲಸಮಾಧಿಯಾಗಿದ್ದು, ತಮ್ಮ ಪ್ರೀತಿ ಪಾತ್ರರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 
ಕನಗನಮರಡಿ ಗ್ರಾಮದ ನಿವಾಸಿಯಾಗಿರುವ ಜವರಮ್ಮ ಅವರಿಗೆ ಶನಿವಾರ ಕರಾಳ ದಿನವಾಗಿತ್ತು. ಬೆಳಗಿನ ಸಮಯದಲ್ಲಿ ತನ್ನ ಕೆಲಸವನ್ನು ಮುಗಿಸುತ್ತಿದ್ದ ಜವರಮ್ಮ ಅವರು ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಬಸ್ಸಿನಿಂದ ಇಳಿಯಲು ಇನ್ನು 1.5 ಕಿಮೀ ಇರುವಾಗ ದುರಂತ ಸಂಭವಿಸಿದ್ದು, ಜವರಮ್ಮ ಅವರು ಮೃತಪಟ್ಟಿದ್ದಾರೆ. 
ಘಟನೆಯಲ್ಲಿ ಸುಮಾ ಎಂಬುವವರು ಮೃತಪಟ್ಟಿದ್ದು, ಸುಮಾ ಅವರು ತವರು ಮನೆಗೆ ಹೋಗಬೇಕೆಂದಾಗಲೆಲ್ಲೇ ಪತಿ ಉದಾದೇಶ್ ಅವರೇ ಡ್ರಾಪ್ ಮಾಡುತ್ತಿದ್ದರು. ಆದರೆ, ಹಣೆಬರಹ ಎಂಬಂತೆ ನಿನ್ನೆ ಪಾಂಡವಪುರದಲ್ಲಿ ಕೆಲಸ ಇದ್ದ ಹಿನ್ನಲೆಯಲ್ಲಿ ಉದಾದೇಶ್ ಅವರು ಪತ್ನಿಯನ್ನು ಬಸ್ ನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಬಸ್ ಹತ್ತಿದ್ದ 10 ನಿಮಿಷಗಳಲ್ಲೇ ಸುಮಾ ಅವರು ಮೃತಪಟ್ಟಿದ್ದಾರೆ. 
ಸಂಜತ್ ಅವರ ಪುತ್ರಿ ಅನುಷಾ ಪ್ಯಾರಾಮೆಡಿಕಲ್ ಕೋರ್ಸ್ ಮಾಡುತ್ತಿದ್ದು, ದುರಂತದಲ್ಲಿ ಮೃತಪಟ್ಟಿದ್ದಾರೆ. ನನ್ನ ಪುತ್ರಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದಳು. ಕೋರ್ಸ್ ಪೂರ್ಣಗೊಂಡ ಬಳಿಕ ಪ್ರತಿಷ್ಠಿತ ಕಾರ್ಪೊರೇಟ್ ಆಸ್ಪತ್ರೆಗೆ ಸೇರ್ಪಡೆಗೊಳ್ಳಲು ಇಚ್ಛಿಸಿದ್ದಳು ಎಂದು ಕಾರ್ಪೆಂಟರ್ ಸಂಪತ್ ಅವರು ಹೇಳಿದ್ದಾರೆ. 
ನನ್ನ ಕುಟುಂಬದ ನಾಲ್ವರು ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ. ಪತ್ನಿ ಮಂಜುಳಾಳನ್ನೂ ಕಳೆದುಕೊಂಡಿದ್ದೇನೆಂದು ನಗರಾಜಾಚರ್ ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಪವಿತ್ರಾ ಎಂಬ ಯುವತಿಯ ಪೋಷಕರು ಮಾತನಾಡಿ, ಪವಿತ್ರ ಎಲ್ಲಾ ಶಿಕ್ಷಕರಿಗೂ ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಗ್ರಾಮದಲ್ಲೂ ಆಕೆಯನ್ನು ಬಹಳಷ್ಟು ಮಂದಿ ಇಷ್ಟಪಡುತ್ತಿದ್ದರು. ಕುಟುಂಬದಲ್ಲಿ ಒಬ್ಬಳೇ ಮಗಳಾಗಿದ್ದ ಪವಿತ್ರಾ ಇನ್ನಿಲ್ಲ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ಸಂಬಂಧಿ ರುದ್ರೇಶ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com