ಸಿಂಗಾಪುರಕ್ಕೆ ಕಳ್ಳ ಸಾಗಣೆಯಾಗಿದ್ದ 50ಕ್ಕೂ ಹೆಚ್ಚು ನಕ್ಷತ್ರ ಆಮೆಗಳ ರಕ್ಷಣೆ

ಕೆಲ ಸಮಯಗಳ ಹಿಂದೆ ಕಾಣೆಯಾಗಿದ್ದ 50ಕ್ಕೂ ಹೆಚ್ಚು ಭಾರತೀಯ ನಕ್ಷತ್ರ ಆಮೆಗಳನ್ನು ಸುರಕ್ಷಿತವಾಗಿ ...
ದೆಹಲಿಯ ರಕ್ಷಣಾ ಕೇಂದ್ರದಲ್ಲಿ ರಕ್ಷಿಸಲ್ಪಟ್ಟ ನಕ್ಷತ್ರ ಆಮೆಗಳು
ದೆಹಲಿಯ ರಕ್ಷಣಾ ಕೇಂದ್ರದಲ್ಲಿ ರಕ್ಷಿಸಲ್ಪಟ್ಟ ನಕ್ಷತ್ರ ಆಮೆಗಳು

ನವದೆಹಲಿ: ಕೆಲ ಸಮಯಗಳ ಹಿಂದೆ ಕಾಣೆಯಾಗಿದ್ದ 50ಕ್ಕೂ ಹೆಚ್ಚು ಕರ್ನಾಟಕ ಮೂಲದ ಪ್ರಬೇಧ ನಕ್ಷತ್ರ ಆಮೆಗಳನ್ನು ಸುರಕ್ಷಿತವಾಗಿ ವಾಪಸ್ ತರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ನಕ್ಷತ್ರ ಆಮೆಗಳನ್ನು ಸಿಂಗಾಪುರಕ್ಕೆ ಕಳ್ಳ ಸಾಗಣೆ ಮಾಡಲಾಗಿತ್ತು. ಅದನ್ನು ಅಲ್ಲಿನ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಒಂದೂವರೆ ವರ್ಷದ ಹಿಂದೆ ದೆಹಲಿಯಿಂದ ನಕ್ಷತ್ರ ಆಮೆಗಳನ್ನು ಕಳ್ಳ ಸಾಗಣೆ ಮಾಡಿದ್ದವರಿಂದ ಸರ್ಕಾರೇತರ ಸಂಘಟನೆಯಾದ ಎಸ್ಒಎಸ್ ರಕ್ಷಿಸಿ ತಾಯ್ನಾಡಿಗೆ ಮರಳಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಎನ್ ಜಿಒ ಅಧಿಕಾರಿಗಳು ತಪಾಸಣೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ 51 ಆಮೆಗಳನ್ನು ಭಾರತಕ್ಕೆ ಸಾಗಿಸಿದ್ದಾರೆ ಎಂದು ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ನಕ್ಷತ್ರ ಆಮೆಗಳು ಕಳ್ಳ ಸಾಗಣೆಯಾದ ಬಗ್ಗೆ ತಿಳಿದುಬಂದ ಕೂಡಲೇ ವನ್ಯಮೃಗಗಳನ್ನು ರಕ್ಷಿಸುವ ಕೆಲಸ ಮಾಡುತ್ತಿರುವ ಎಸ್ಒಎಸ್ ಮತ್ತು ಸಿಂಗಾಪುರದ ಏಕರ್ಸ್ ಸಂಸ್ಥೆ ಭಾರತ ಮತ್ತು ಸಿಂಗಾಪುರ ಸರ್ಕಾರಗಳ ನೆರವಿನೊಂದಿಗೆ ಆಮೆಗಳನ್ನು ರಕ್ಷಿಸಿವೆ. ಭಾರತಕ್ಕೆ ಮರಳಿದ ಕೂಡಲೇ ಆಮೆಗಳನ್ನು ಅವುಗಳ ನೈಸರ್ಗಿಕ ವಾಸಸ್ಥಾನ ಕರ್ನಾಟಕಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟೊಂದು ಸುದೀರ್ಘ ಕಾಲ ಆಮೆಗಳನ್ನು ಕಾಪಾಡಲು ಅವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಪೆಟ್ಟಿಗೆಗಳಲ್ಲಿ ಇಡಲಾಗಿದೆ.

ಭಾರತದ ಕರ್ನಾಟಕದ ಪ್ರದೇಶಗಳಲ್ಲಿ ನೆಲೆಸಿರುವ ನಕ್ಷತ್ರ ಆಮೆಗಳನ್ನು 1972ರ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ರಕ್ಷಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com