ಕೊಡಗು ಪ್ರವಾಹ: ತಿಂಗಳುಗಳೇ ಕಳೆದರೂ ಇನ್ನೂ ಕೆಲವು ಮನೆಗಳು ನೀರಿನಲ್ಲೇ!

ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಸಮಸ್ಯೆಗಳ ಸರಮಾಲೆ ಇನ್ನೂ ಮುಗಿದಿಲ್ಲ, ಅಲ್ಲಿ ಜೀವಿಸುತ್ತಿರುವ ಜನರ ಜೀವನ ಪರಿಸ್ಥಿತಿ ..
ಕೊಡಗು ಪ್ರವಾಹ (ಸಂಗ್ರಹ ಚಿತ್ರ)
ಕೊಡಗು ಪ್ರವಾಹ (ಸಂಗ್ರಹ ಚಿತ್ರ)
ಮಡಿಕೇರಿ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಸಮಸ್ಯೆಗಳ ಸರಮಾಲೆ ಇನ್ನೂ ಮುಗಿದಿಲ್ಲ, ಅಲ್ಲಿ ಜೀವಿಸುತ್ತಿರುವ ಜನರ ಜೀವನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.
ಶುಂಠಿಕೊಪ್ಪ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮನೆಗಳಿದ್ದ ಸ್ಥಳ ಸರೋವರದಂತಾಗಿದೆ. ದೈನಂದಿನ ಕೂಲಿಕಾರರಾದ ಮುತ್ತಮ್ಮ ಎಂಬುವರ ಮನೆ ಇನ್ನೂ ನೀರಿನ ಅಡಿಯಲ್ಲೇ ಇದೆ. 
ಪ್ರವಾಹದಿಂದ ಉಂಟಾದ ನೀರು ಇನ್ನೂ ತೆರವು ಮಾಡಿಲ್ಲ, ಆರಂಭದಲ್ಲಿ ಶಾಸಕರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು ಮಾತ್ರ, ಆನಂತರ ಯಾರೋಬ್ಬರು ಈ ಕಡೆ ತಲೆ ಹಾಕಿಲ್ಲ,
ಸಾರ್ವಜನಿಕ ಸಭೆ ವೇಳೆ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದೆವು, ಆದರೇ ಅದಕ್ಕಾಗಿ ಅವರು 2 ಲಕ್ಷ ರು ಹಣ ಕೇಳಿದರೂ, ಮನೆಯಿರುವ ಜಾಗಕ್ಕೆ ಅರ್ಥ್ ಮೂವರ್ ತೆರಳಲು ಸಾಧ್ಯವಿಲ್ಲ ಹೀಗಾಗಿ ಖರ್ಚಿನ ಶೇ. 50 ರಷ್ಟು ಭರಿಸಲು ಕುಂಟುಂಬಸ್ಥರಲ್ಲಿ ಕೇಳಿದ್ದಾಗಿ ಜಿಲ್ಲಾಡಳಿತ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com