ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಬೆಂಗಳೂರಲ್ಲೇ ಸಂಚು ರೂಪಿಸಿದ್ದ ಜೆಎಂಬಿ ಉಗ್ರರು!

ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಜೆಎಂಬಿ (ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ) ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ.
ಬಂಧಿತ ಉಗ್ರ ಮುನೀರ್ ಶೇಖ್ ಮತ್ತು ದಲೈಲಾಮಾ
ಬಂಧಿತ ಉಗ್ರ ಮುನೀರ್ ಶೇಖ್ ಮತ್ತು ದಲೈಲಾಮಾ
ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಜೆಎಂಬಿ (ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ) ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ.
ಕಳೆದ ತಿಂಗಳು ರಾಮನಗರದಲ್ಲಿ ಎನ್ ಐಎ ಅಧಿಕಾರಿಗಳಿಂದ ಬಂಧಿತರಾಗಿದ್ದ ಶಂಕಿತ ಜೆಎಂಬಿ ಉಗ್ರರ ವಿಚಾರಣೆ ತೀವ್ರಗೊಂಡಿದ್ದು, ವಿಚಾರಣೆ ವೇಳೆ ಉಗ್ರರು ಹಲವು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ನಡೆದ ವಿಚಾರಣೆ ವೇಳೆ ಉಗ್ರರು ಬೌದ್ಧ ಧರ್ಮದ ಗುರು ದಲೈಲಾಮ ಅವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದ ವಿಚಾರವನ್ನು ಬಯಲು ಮಾಡಿದ್ದಾರೆ.
ಅಲ್ಲದೆ 2018ರ ಆರಂಭದಲ್ಲೇ ಉಗ್ರರು ಹಲವು ಸ್ಫೋಟ ನಡೆಸುವ ಕುರಿತು ಯೋಜನೆ ರೂಪಿಸಿದ್ದರು. ಅಲ್ಲದೆ ಬೌದ್ಧ ಗುರು ದಲೈಲಾಮ ಅವರು ರಾಮನಗರಕ್ಕೆ ಆಗಮಿಸಿದ ಬಳಿಕ ಅವರನ್ನು ಅಲ್ಲಿಯೇ ಕೊಲೆಗೈಯ್ಯಲು ಸಂಚು ರೂಪಿಸಲಾಗಿತ್ತು ಎಂದು ಬಂಧಿತ ಉಗ್ರ  ಮುನೀರ್ ಶೇಖ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಬೌದ್ಧ ಧರ್ಮಗುರು ದಲೈಲಾಮಾ ಅವರು ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರು. ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರಿಂದ ಜೆಎಂಬಿ ಉಗ್ರ ಸಂಘಟನೆ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಇನ್ನು ಎನ್ ಐಎ ವಿಚಾರಣೆ ವೇಳೆ ಉಗ್ರರು ದಲೈಲಾಮ ಮಾತ್ರವಲ್ಲದೇ ಬಿಹಾರದ ರಾಜ್ಯಪಾಲ ಲಾಲ್ ಜೀ ಟಂಡನ್ ಅವರನ್ನೂ ಕೂಡ ಹತ್ಯೆಗೈಯುವ ಕುರಿತು ಯೋಜನೆ ರೂಪಿಸಿದ್ದರು. ಲಾಲ್ ಜೀ ಕೂಡ ರೋಹಿಂಗ್ಯಾ ವಿರೋಧಿಗಳಾಗಿದ್ದು, ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಬೇಕು ಎಂದು ಉಗ್ರರು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.
ಬಿಹಾರ ರಾಜ್ಯಪಾಲರ ಜತೆಗೆ ದಲೈಲಾಮ ಭಾಗವಹಿಸಬೇಕಿದ್ದ ಕಾರ್ಯಕ್ರಮದಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಇದೀಗ ಈ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಉಗ್ರ ಮುನೀರ್ ಜತೆಗೆ, ಪೈಗಂಬರ್ ಶೇಖ್, ಮುನೀರ್, ನೂರ್ ಅಸ್ಲಾಂ ಮೊಮಿನ್ ಎಂಬ ಉಗ್ರರನ್ನೂ ಬಂಧಿಸಲಾಗಿದೆ. ಇದೀಗ ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.
ಕಳೆದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಎನ್​ಐಎ ಮತ್ತು ಕೇಂದ್ರ ಗುಪ್ತಚರ ಇಲಾಖೆಯ(ಐಬಿ) 50 ಅಧಿಕಾರಿಗಳ ತಂಡ ರಾಮನಗರ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮುನೀರ್ ಶೇಖ್ (35 ವರ್ಷ) ಎಂಬಾತನನ್ನು ಈತ ವಾಸವಿದ್ದ ಮನೆಯಲ್ಲಿ ಬಂಧಿಸಿದ್ದರು. ಅಲ್ಲದೆ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಭೂಪಟ, ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com