ನಗರದಲ್ಲಿ 'ಸೈಬರ್ ತನಿಖಾ ಕೇಂದ್ರ' ನಿರ್ಮಾಣಕ್ಕೆ ಇನ್ಫೋಸಿಸ್ ನೆರವು

ಸೈಬರ್ ಕ್ರೈಂ ಅಪರಾಧಗಳ ಪತ್ತೆ ಹಚ್ಚುವ ಹೊಸ ತಂತ್ರಜ್ಞಾನ ಅನುಷ್ಠಾನಗೊಳಿಸುವ ಸಂಬಂಧ ಸೈಬರ್ ಲ್ಯಾಬ್ ಮತ್ತು ತರಬೇತಿ ಸಂಸ್ಥೆ ನಿರ್ಮಾಣಕ್ಕಾಗಿ ಇನ್ಫೋಸಿಸ್ ಮತ್ತು ಪೊಲೀಸ್ ಇಲಾಖೆಯ ಸಿಐಡಿ ನಡುವಿನ ಒಪ್ಪಂದಕ್ಕೆ...
ನಗರದಲ್ಲಿ 'ಸೈಬರ್ ತನಿಖಾ ಕೇಂದ್ರ' ನಿರ್ಮಾಣಕ್ಕೆ ಇನ್ಫೋಸಿಸ್ ನೆರವು
ನಗರದಲ್ಲಿ 'ಸೈಬರ್ ತನಿಖಾ ಕೇಂದ್ರ' ನಿರ್ಮಾಣಕ್ಕೆ ಇನ್ಫೋಸಿಸ್ ನೆರವು
ಬೆಂಗಳೂರು: ಸೈಬರ್ ಕ್ರೈಂ ಅಪರಾಧಗಳ ಪತ್ತೆ ಹಚ್ಚುವ ಹೊಸ ತಂತ್ರಜ್ಞಾನ ಅನುಷ್ಠಾನಗೊಳಿಸುವ ಸಂಬಂಧ ಸೈಬರ್ ಲ್ಯಾಬ್ ಮತ್ತು ತರಬೇತಿ ಸಂಸ್ಥೆ ನಿರ್ಮಾಣಕ್ಕಾಗಿ ಇನ್ಫೋಸಿಸ್ ಮತ್ತು ಪೊಲೀಸ್ ಇಲಾಖೆಯ ಸಿಐಡಿ ನಡುವಿನ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಯಿತು. 
ವಿಧಾನಸೌಧದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಕರಾರು ಪತ್ರಕ್ಕೆ ಸಹಿ ಹಾಕಿದರು. 
ಇನ್ಫೋಸಿಸ್ ಪ್ರತಿಷ್ಠಾನವು ಸುಮಾರು ರೂ.22 ಕೋಟಿ ವೆಚ್ಚದಲ್ಲಿ ಸೈಬರ್ ತನಿಖಾ ಕೇಂದ್ರ ನಿರ್ಮಿಸಿಕೊಡಲಿದೆ. 
ಈ ಕುರಿತು ಮಾತನಾಡಿದ ಸುಧಾಮೂರ್ತಿಯವರು, ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅದರ ಜೊತೆ ಕೈ ಜೋಡಿಸಬೇಕು. ಹಣಕ್ಕಿಂತ ಹೆಚ್ಚು ಉತ್ತಮ ಯೋಜನೆ ಇರಬೇಕು. ಸರ್ಕಾರ ಈ ಕಾರ್ಯಕ್ರಮವು ಸಂತೋಷವನ್ನುಂಟು ಮಾಡಿದೆ. ರೂ.22 ಕೋಟಿ ವೆಚ್ಚದಲ್ಲಿ ಸೈಬರ್ ಲ್ಯಾಬ್ ನಿರ್ಮಾಣ ಮಾಡಿಕೊಡಲಾಗುತ್ತಿದೆ. 5 ವರ್ಷ ಅದನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಈಗಾಗಲೇ ರೂ.1 ಕೋಟಿ ವೆಚ್ಚದಲ್ಲಿ ಕೆಲಸ ಪ್ರಾಂರಭಿಸಲಾಗಿದೆ ಎಂದು ಹೇಳಿದರು. 
ಬಳಿಕ ಮಾತನಾಡಿದ ಪರಮೇಶ್ವರ್ ಅವರು, ಇನ್ಫೋಸಿಸ್ ಪ್ರತಿಷ್ಠಾನವು ಮೊದಲಿನಿಂದಲೂ ಪೊಲೀಸ್ ಇಲಾಖೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡುತ್ತಿದೆ. ಈಗ ಸೈಬರ್ ಲ್ಯಾಬ್ ಮತ್ತು ತರಬೇತಿ ಕೇಂದ್ರ ನಿರ್ಮಿಸಲು ಮುಂದೆ ಬಂದಿರುವುದು ಇತರೆ ಕಾರ್ಪೋರೇಟ್ ಕಂಪನಿಗಳಿಗೆ ಮಾದರಿಯಾಗಿದೆ. ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. 
ಹೊಸದೊಂದು ತಂತ್ರಜ್ಞಾನದ ಅನುಷ್ಠಾನಕ್ಕೆ ಪ್ರತಿಷ್ಠಾನವು ಸರ್ಕಾರದೊಂದಿದೆ ಕೈ ಜೋಡಿಸಿದೆ. ಆಧುನಿಕ ಜಗತ್ತಿನ ತಾಂತ್ರಿಕತೆಯಲ್ಲಿ ಅಪರಾಧಿಗಳನ್ನು ಪತ್ತೆ ಹೆಚ್ಚುವ ತಂತ್ರಜ್ಞಾನ ಇದಾಗಿದೆ. ಇದು ಮೊದಲ ಬಾರಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ತಂತ್ರಜ್ಞಾನದಲ್ಲಿ ಕರ್ನಾಟಕ ಪೊಲೀಸ್ ಒಂದು ಹೆಜ್ಜೆ ಮುಂದೆ ಹೋಗಿದೆ. ರಾಜ್ಯ ಪೊಲೀಸ್ ಇಲಾಖೆ ಇಡೀ ದೇಶದಲ್ಲಿ ಮಾದರಿ ಇನ್ನುವಂತೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವನ್ನು ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹಲವು ಖಾಸಗಿ ಸಂಸ್ಥೆಗಳು ಸಹಾಯ ಹಸ್ತೆ ಚಾಚಬೇಕು. ಪೊಲೀಸರಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನೂ ಪ್ರೋತ್ಸಾಹ ಸಿಗಬೇಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com