ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಸಮಾನ ಮನಸ್ಕರೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಅಭಿಯಾನ ಹಾಗೂ ಸ್ವಚ್ಛತೆಗಾಗಿ ಓಟ (ಪ್ಲಾಗ್ ರನ್) ಆಯೋಜಿಸಲಾಗಿತ್ತು,.
ಬಿಬಿಎಂಪಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 12 ಗಂಟೆಗಳ ಕಾಲದ ಪ್ಲಾಗ್ ರನ್ ನಲ್ಲಿ ಬರೋಬ್ಬರೀ 10 ಲಕ್ಷ ಪ್ಲಾಸ್ಟಿಕ್ ಬಾಟಲ್ ಸಂಗ್ರಹವಾಗಿದೆ, ನಗರದ 50 ಸ್ಥಳಗಳಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 33.461 ಕಿಲೋಗ್ರಾಮ್ ವಾಟರ್ ಬಾಟಲ್ ಸಂಗ್ರಹಿಸಲಾಗಿದೆ.
ಅಪಾರ್ಟ್ ಮೆಂಟ್ ಬ್ಲಾಕ್ಸ್. ಮಾರಾಟಗಾರರು ಹಾಗೂ ಹೋಟೆಲ್ ಮತ್ತಿತರ ಕಡೆಗಳಿಂದ ಖಾಲಿ ಬಾಟಲ್ ಸಂಗ್ರಹಿಸಲಾಗಿದೆ ಈ ಬಾಟಲ್ ಗಳನ್ನು ಪುನರ್ಬಳಕೆ ಮಾಡಲಾಗುವುದು, ರಸ್ತೆ ಕಾಮಗಾರಿ ಕೆಲಸಕ್ಕೆ ಕಚ್ಚಾ ಸಾಮಾಗ್ರಿ ಬಳಕೆ ಮಾಡಲಾಗುತ್ತದೆ,
ಪ್ಲಾಸ್ಟಿಕ್ ವಾಟರ್ ಬಾಟಲ್ ಬಗ್ಗೆ ಜನರಿಗೆ ಮೂರು ದಿನಗಳ ಅರಿವೂ ಮೂಡಿಸುವ ಸಲುವಾಗಿ 3 ದಿನಗಳ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ, ಕೆಲ ಸಂಘಟನೆಗಳು ಸ್ವಯಂ ಆಗಿ ಬಿಬಿಎಂಪಿ ಕಚೇರಿಗೆ ಬಂದು ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ನೀಡಿವೆ,
ಸುಮಾರು 27 ಸಾವಿರ ಟನ್ ಬಾಟಲ್ ಸಂಗ್ರಹಿಸುವ ಗುರಿ ಹೊಂದವಾಗಿತ್ತು ಎಂದು ಹೇಳಿದ್ದಾರೆ