ಕರ್ನಾಟಕದಲ್ಲಿ ಬಿಲ್ಡರ್ ಗಳಿಂದ ರೇರಾ ಗಳಿಸಿದ ದಂಡದ ಮೊತ್ತ 8.8 ಕೋಟಿ ರೂ.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ), ತಮ್ಮ ಯೋಜನೆಗಳನ್ನು ಇನ್ನೂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು; ತಮ್ಮ ಯೋಜನೆಗಳನ್ನು ಇನ್ನೂ ದಾಖಲಾತಿ ಮಾಡಿಕೊಳ್ಳದ ಬಿಲ್ಡರ್ ಗಳಿಂದ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) 8.83 ಕೋಟಿ ರೂಪಾಯಿ ದಂಡ ಸ್ವೀಕರಿಸಿದೆ.

ಅಲ್ಲದೆ ಪ್ರಾಧಿಕಾರದ ಪೋರ್ಟಲ್ ನಲ್ಲಿ ಸಾರ್ವಜನಿಕರು ರಾಜ್ಯಾದ್ಯಂತ 970 ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡದಂತೆ ಎಚ್ಚರಿಕೆ ನೀಡಿದೆ. ಕಳೆದ ಜನವರಿಯಲ್ಲಿ 780 ಯೋಜನೆಗಳಲ್ಲಿ ಹೂಡಿಕೆ ಮಾಡದಂತೆ ಪ್ರಾಧಿಕಾರ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿತ್ತು.

ನಿವೇಶನ, ಫ್ಲಾಟ್ ಗಳ ಖರೀದಿದಾರರ ಹಿತರಕ್ಷಣೆಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮವನ್ನು ನಿಯಂತ್ರಣದಲ್ಲಿಡಲು ದೇಶಾದ್ಯಂತ ಪ್ರಾಧಿಕಾರ ರಚಿಸಬೇಕೆಂದು ಕಡ್ಡಾಯ ಮಾಡಲಾಗಿತ್ತು. 2017ರ ಜುಲೈಯಲ್ಲಿ ರೇರಾದ ಕರ್ನಾಟಕ ಶಾಖೆ ಅಸ್ಥಿತ್ವಕ್ಕೆ ಬಂದಿತ್ತು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರೇರಾ ಅಧಿಕಾರಿಯೊಬ್ಬರು, ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿದ 2,583 ಯೋಜನೆಗಳಲ್ಲಿ 2,019 ಯೋಜನೆಗಳು ದಾಖಲಾಗಿವೆ. ಉಳಿದವು ಪ್ರಕ್ರಿಯೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

ದಾಖಲಾತಿ ಮಾಡಿಕೊಳ್ಳದಿರುವ ಬಿಲ್ಡರ್ ಗಳನ್ನು ಪತ್ತೆಹಚ್ಚಿ ದಂಡ ವಿಧಿಸಲು ಸಾರ್ವಜನಿಕರ ದೂರು ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ರೇರಾ ಪ್ರಾರಂಭಿಸಿದೆ. ಹಲವು ಬಾರಿ ನೊಟೀಸ್ ಕಳುಹಿಸಿದ ನಂತರ ಕೂಡ ದಾಖಲಾತಿ ಮಾಡಿಕೊಳ್ಳದಿರುವ ಹಲವು ಬಿಲ್ಡ ರ್ ಗಳ ಮೇಲೆ ದಂಡ ಹಾಕಿದ್ದೇವೆ. ದಾಖಲಾತಿ ವಿಳಂಬ ಅಥವಾ ಇನ್ನೂ ಮಾಡಿಕೊಳ್ಳದಿರುವವರಿಗೆ ಹಾಕಿರುವ ದಂಡದಿಂದ 8.80 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದರು.

ಯೋಜನೆ ವೆಚ್ಚದ ಶೇಕಡಾ 10ರಷ್ಟು ದಂಡವನ್ನು ರೇರಾ ಕಾಯ್ದೆಯಡಿ ಹೇರುವ ಅವಕಾಶವಿದ್ದರೂ ಕೂಡ ಪ್ರಸ್ತುತ ವಿಧಿಸುತ್ತಿರುವುದು ಶೇಕಡಾ 1ರಿಂದ 2ರಷ್ಟು ಮಾತ್ರ ಎಂದರು.

ರೇರಾ ಕಾಯ್ದೆಯಡಿ ತನಿಖೆಯ ಅಡಿಯಲ್ಲಿ ಇರುವ ಯೋಜನೆಗಳು, ಖರೀದಿದಾರರ ಸಾಲ ಅರ್ಜಿಯನ್ನು ಬ್ಯಾಂಕುಗಳು ತಿರಸ್ಕಾರ ಮಾಡುತ್ತವೆ. ಅಲ್ಲದೆ ಯೋಜನೆ ಮುಗಿಯಲು ಮುಂದೆ ಯಾವುದೇ ಸಾಲದ ಕಂತುಗಳನ್ನು ಸಹ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಇನ್ನು ರೇರಾ ಸೂಚಿಸಿದ ಅವಧಿಯೊಳಗೆ ಬಿಲ್ಡರ್ ಗಳು ಯೋಜನೆಗಳನ್ನು ಪೂರ್ಣಗೊಳಿಸದಿದ್ದರೆ ಸಹ ಮುಕ್ತಾಯದ ಪ್ರಮಾಪತ್ರ ನೀಡುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com