ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಬೆಳೆಗಳ ನಾಶವನ್ನು ರೈತರು ಪರಿಶೀಲಿಸುತ್ತಿರುವುದು
ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಬೆಳೆಗಳ ನಾಶವನ್ನು ರೈತರು ಪರಿಶೀಲಿಸುತ್ತಿರುವುದು

ಬಳ್ಳಾರಿ: ಭಾರೀ ಮಳೆಗೆ ಮನೆ, ಬೆಳೆ ನಾಶ, ರೈತರಲ್ಲಿ ಆತಂಕ

ಜಿಲ್ಲೆಯಲ್ಲಿ ನಿನ್ನೆ ವೇಗವಾಗಿ ಬೀಸಿದ ಗಾಳಿ ಮತ್ತು ಆಲಿಕಲ್ಲು ಬಿದ್ದ ಧಾರಾಕಾರ ಮಳೆಗೆ ಹೂವಿನಹಡಗಲಿ ...

ಬಳ್ಳಾರಿ: ಜಿಲ್ಲೆಯಲ್ಲಿ ನಿನ್ನೆ ವೇಗವಾಗಿ ಬೀಸಿದ ಗಾಳಿ ಮತ್ತು ಆಲಿಕಲ್ಲು ಬಿದ್ದ ಧಾರಾಕಾರ ಮಳೆಗೆ ಹೂವಿನಹಡಗಲಿ ಎಂಬಲ್ಲಿ ಅನೇಕ ಗುಡಿಸಲು, ಮನೆ ಮತ್ತು ರೈತರ ಬೆಳೆಗಳು ನಾಶವಾಗಿದೆ.

ಈ ಬಾರಿ ಮುಂಗಾರಿನಲ್ಲಿ ತುಂಗಭದ್ರಾ ನದಿಗೆ ಉತ್ತಮ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿದ್ದರಿಂದ ಕಂಪ್ಲಿ ಸುತ್ತಮುತ್ತಲಿನ ಭಾಗದ ರೈತರು ಖುಷಿಪಟ್ಟಿದ್ದರು. ಹೂವಿನಹಡಗಲಿ ಭಾಗದ ರೈತರು ಮಳೆಗಾಗಿ ದೇವರ ಮೊರೆಹೋಗಿದ್ದರು, ಕೊನೆಗೂ ಉತ್ತಮ ಮಳೆ ಸುರಿದರೂ ಕೂಡ ಅದು ಅಧಿಕವಾಗಿ ಬೆಳೆ ನಾಶ, ಅನೇಕ ವಸ್ತುಗಳು, ಆಸ್ತಿಪಾಸ್ತಿಗಳು ನಾಶವಾಗಿ ಇದೀಗ ಮಳೆ ನಿಲ್ಲಲು ಅಲ್ಲಿನ ಭಾಗದ ಜನರು ದೇವರ ಮೊರೆ ಹೋಗುತ್ತಿದ್ದಾರೆ.

ಹೂವಿನಹಡಗಲಿ ತಾಲ್ಲೂಕಿನ ಹೊಳಲು ಮತ್ತು ಮೈಲಾರ ಗ್ರಾಮದಲ್ಲಿ ನಿಧಾನವಾಗಿ ಕೃಷಿ ಕಾಂತ್ರಿಯಾಗುತ್ತಿದ್ದು ಇಲ್ಲಿ ಸಣ್ಣ ಜಮೀನು ಮಾಲೀಕರು ಕೃಷಿಗಳಿಗೆ ಬೀಜಗಳ ಪೂರೈಕೆಗೆ ಕೃಷಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳಿಂದ ಲಕ್ಷಗಟ್ಟಲೆ ಹಣ ಪಡೆದು ಪ್ರತಿ ಕೆಜಿಗೆ 5 ಸಾವಿರ ರೂಪಾಯಿಗಳಂತೆ ಬೀಜ ಪೂರೈಸಲು ಮನೆಗಳ ನಿರ್ಮಾಣಕ್ಕೆ ರೈತರು ಒಪ್ಪಂದ ಮಾಡಿಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com