ರೂ.5ಕ್ಕೆ ಹುಬ್ಬಳ್ಳಿ-ಧಾರವಾಡ ಪ್ರಾಯೋಗಿಕ ಬಿಎಂಟಿಸ್ ಬಸ್ ಸಂಚಾರ ಆರಂಭ

ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಹೆಚ್'ಡಿಬಿಆರ್'ಟಿಎಸ್) ರೂ.5ಕ್ಕೆ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ...
ರೂ.5ಕ್ಕೆ ಹುಬ್ಬಳ್ಳಿ-ಧಾರವಾಡ ಪ್ರಾಯೋಗಿಕ ಬಿಎಂಟಿಸ್ ಬಸ್ ಸಂಚಾರ ಆರಂಭ
ರೂ.5ಕ್ಕೆ ಹುಬ್ಬಳ್ಳಿ-ಧಾರವಾಡ ಪ್ರಾಯೋಗಿಕ ಬಿಎಂಟಿಸ್ ಬಸ್ ಸಂಚಾರ ಆರಂಭ
ಹುಬ್ಬಳ್ಳಿ: ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಹೆಚ್'ಡಿಬಿಆರ್'ಟಿಎಸ್) ರೂ.5ಕ್ಕೆ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. 
ಅಗ್ಗದ ದರದಲ್ಲಿ ಬಿಎಂಟಿಸಿ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದ್ದು, ರೂ.5ಕ್ಕೆ ಜನರು ಬಿಎಸ್ಎನ್ಎಲ್ ನಿಲ್ದಾಣದಿಂದ ಶ್ರೀನಗರ ಕ್ರಾಸ್ ವರೆಗೆ ಸಂಚಾರ ನಡೆಸಬಹುದಾಗಿದೆ. ಅಕ್ಟೋಬರ್ 2 ರಿಂದಲೇ ಹುಬ್ಬಳ್ಳಿ-ಧಾರವಾಡದ ನಡುವೆ ಪ್ರಾಯೋಗಿಕ ಸಂಚಾರ ಆರಂಭವಾಗಿತ್ತು. 
ಬಿಎಸ್ಎನ್ಎಲ್ ನಿಲ್ದಾಣದಿಂದ ಶ್ರೀನಗರ ಕ್ರಾಸ್ ಮಧ್ಯೆಯಿರುವ 8 ನಿಲ್ದಾಣಗಳಲ್ಲಿ ಪ್ರಯಾಣಿಕರು ಎಲ್ಲಿ ಬೇಕಾದರೂ ಬಸ್ ಹತ್ತಬಹುದು. ಪ್ರಯಾಣಕ್ಕೆ ಕೇವಲ ರೂ.5 ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಎನ್'ಡಬ್ಲ್ಯೂಕೆಆರ್'ಟಿಸಿ ಬಸ್ ಬಿಎಸ್ಎನ್ಎಲ್ ನಿಲ್ದಾಣದಿಂದ ಶ್ರೀನಗರ ಕ್ರಾಸ್ ವರೆಗೆ ರೂ.13 ಪಡೆಯುತ್ತಿದೆ. 
ಬಿಆರ್'ಟಿಸಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಮಾತನಾಡಿ, ಪ್ರಾಯೋಗಿಕ ದರವನ್ನು ಶುಕ್ರವಾರದಿಂದಲೇ ಪಡೆಯಲಾಗುತ್ತಿದೆ. ಅಗ್ಗದ ದರದ ಸೇವೆ ಕೆಲವು ಸಮಯಗಳು ಮಾತ್ರವೇ ಇರುತ್ತದೆ ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ ಹಳೇ ಬಸ್ ನಿಲ್ದಾಣ ಮತ್ತು ಹೊಸೂರಿನ  ಬಿಆರ್'ಟಿಸಿ ಕಾರಿಡಾರ್ ಬಳಿ ತೆರಳಿದ ಅಧಿಕಾರಿಗಳು ಪೊಲೀಸರು ಹಾಗೂ ಎನ್'ಡಬ್ಲ್ಯೂಕೆಆರ್'ಟಿಸಿ ಅಧಿಕಾರಿಗಳೊಂದಿಗೆ ತಾಂತ್ರಿಕ ಸಮಸ್ಯೆಗಳ ಕುರಿತಂತೆ ಮಾತುಕತೆ ನಡೆಸಿದರು. 
ರಾಣಿ ಚೆನ್ನಮ್ಮ ಸರ್ಕಲ್ ಬಳಿ ರಸ್ತೆ ಸಮಸ್ಯೆ ಎದುರಾಗಿದ್ದು, ಚಿಗರಿಗೆ ತೆರಳುವ ಬಿಆರ್'ಟಿಸಿ ಬಸ್ ಗಳ ಸಮಯವನ್ನು ಕಡಿತಗೊಳಿಸಲಾಗಿದೆ. ಹೆಚ್'ಡಿಬಿಆರ್'ಟಿಎಸ್ ಮತ್ತು ಎನ್'ಡಬ್ಲ್ಯೂಕೆಆರ್'ಟಿಸಿ ಬಸ್ ಗಳನ್ನು ನೂತವಾಗಿ ನಿರ್ಮಾಣಗೊಂಡಿರುವ ಹೊಸೂರು ಬಸ್ ಇಂಟರ್ಚೇಂಜ್ ಟರ್ಮಿನಲ್'ಗೆ ಸ್ಥಳಾಂತರಿಸಲಾಗಿದೆ ಎಂದು ಚೋಳನ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com