ಮಂಗಳೂರು, ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಲಾಕಪ್ ಗಳೇ ಇಲ್ಲ!

ಮಂಗಳೂರು ಹಾಗೂ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೋಣೆಗಳೇ ಇಲ್ಲದ ಕಾರಣ ಮಹಿಳಾ ಪೊಲೀಸರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ...
ಮಂಗಳೂರು, ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೋಣೆಗಳೇ ಇಲ್ಲ!
ಮಂಗಳೂರು, ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೋಣೆಗಳೇ ಇಲ್ಲ!
ಮಂಗಳೂರು: ಮಂಗಳೂರು ಹಾಗೂ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೋಣೆಗಳೇ ಇಲ್ಲದ ಕಾರಣ ಮಹಿಳಾ ಪೊಲೀಸರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. 
ಠಾಣೆಯಲ್ಲಿ ಕೋಣೆಗಳಿಲ್ಲದ ಕಾರಣ ಬಂಧಿತ ಆರೋಪಿಗಳು ತಪ್ಪಿಸಿಕೊಳ್ಳುವ ಸಂದರ್ಭಗಳು ಎದುರಾಗುತ್ತಿದ್ದು, ಈ ವೇಳೆ ಆರೋಪಿಗಳನ್ನು ಹಿಡಿಯುವಾಗ ಪೊಲೀಸರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 
ಮಂಗಳೂರಿನಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಇದರಲ್ಲಿ ಒಂದು ಕೊಠಡಿ ಸಂದರ್ಶನಕಾರರಿಗೆ ಹಾಗೂ ಸಿಬ್ಬಂದಿಗಳಿಗೆ, ಮತ್ತೊಂದು ದಾಖಲಾತಿಗಳನ್ನು ಇಡಲು ಮೀಸಲಿಡಲಾಗಿದೆ. 
ಇನ್ನು ಪೂತ್ತೂರಿನಲ್ಲಿರುವ ಠಾಣೆಯಲ್ಲಿ ಒಟ್ಟು 2 ಕೋಣೆಗಲಿದ್ದು, ಇದರಲ್ಲಿ ಒಂದು ಕೊಠಡಿಯನ್ನು ಸಿಬ್ಬಂದಿಗಳು ಬಳಕೆ ಮಾಡುತ್ತಿದ್ದರೆ, ಮತ್ತೊಂದನ್ನು ಸಂದರ್ಶನಕಾರರಿಗೆ ಮೀಸಲಿಡಲಾಗಿದೆ.
ಒಟ್ಟು 87 ಪ್ರಕರಣಗಳಿದ್ದು 87 ಪ್ರಕರಣಗಳನ್ನು ಎರಡು ಠಾಣೆಗಳು ನೋಡಿಕೊಳ್ಳುತ್ತಿವೆ. ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಈ ಠಾಣೆಗಳು ನೋಡಿಕೊಳ್ಳುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಪ್ರಕರಣಗಳ ಸಂಖ್ಯೆ ಹೆಚ್ಚೇನು ಇಲ್ಲ. ಹೆಚ್ಚೆಚ್ಚು ಆರೋಪಿಗಳನ್ನು ಇರಿಸಿಕೊಳ್ಳಲು ಇಲ್ಲಿ ಸೂಕ್ತ ವ್ಯವಸ್ಥೆಗಳೂ ಇಲ್ಲ. 10ಕ್ಕೂ ಹೆಚ್ಚು ಜನರನ್ನು ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com