ಕಂಬಳ ವಿವಾದ: 'ಪೇಟಾ' ಆಕ್ಷೇಪಕ್ಕೆ ಹೊಸ ಅಸ್ತ್ರ ಹುಡುಕಿದ ಹೋರಾಟಗಾರರು

ಕಂಬಳ ಸಂದರ್ಭ ಬೆತ್ತ ಹಿಡಿಯುವ ಕುರಿತು ಪ್ರಾಣಿದಯಾ ಸಂಸ್ಥೆ 'ಪೇಟಾ' ಆಕ್ಷೇಪಕ್ಕೆ ಉತ್ತರವಾಗಿ ಕಂಬಳ ಹೋರಾಟಗಾರರು ಹೊಸ ಅಸ್ತ್ರವೊಂದನ್ನು ಹುಡುಕಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ಕಂಬಳ ಸಂದರ್ಭ ಬೆತ್ತ ಹಿಡಿಯುವ ಕುರಿತು ಪ್ರಾಣಿದಯಾ ಸಂಸ್ಥೆ 'ಪೇಟಾ' ಆಕ್ಷೇಪಕ್ಕೆ ಉತ್ತರವಾಗಿ ಕಂಬಳ ಹೋರಾಟಗಾರರು ಹೊಸ ಅಸ್ತ್ರವೊಂದನ್ನು ಹುಡುಕಿದ್ದಾರೆ. 
ಕೋಣಕ್ಕೆ ಹೊಡೆದರೂ ತುಂಬಾ ನೋವಾಗದ ಬೆತ್ತವನ್ನು ಹೋರಾಟಗಾರರು ಹುಡುಕಿದ್ದಾರೆ. 
ಈ ಬೆತ್ತದ ತುದಿಗೆ ಎರಡಿಂಚು ಅಗಲದ, ಅರ್ಧ ಅಡಿ ಉದ್ದದ ಫೋಮ್ (ಒಂದು ರೀತಿಯ ಸ್ಪಂಜಿನ ದಪ್ಪ ರಿಬ್ಬನ್) ಅನ್ನು ಎರಡೂ ಕಡೆ ಅಂಟಿಸಲಾಗಿದೆ. ಈ ಬೆತ್ತವನ್ನು ಕೋಣ ನಿಯಂತ್ರಣಕ್ಕೆ ಬಾರದಿದ್ದಾಗ ಮಾತ್ರ ಪ್ರಯೋಗಿಸಲಾಗುತ್ತದೆ. 
ಸೋಮವಾರ ಕಂಬಳ ಪ್ರಶ್ನಿಸಿ ಪೇಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಅಗತ್ಯಬಿದ್ದರೆ ಇದನ್ನು ಪರಿಶೀಲನೆಗೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಉಡುಪಿ ಕಂಬಳ ಸಮಿತಿ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com