ಬೆಂಗಳೂರು: ಲಿಫ್ಟ್ ಕೇಳಿ ಕಾರನ್ನೇ ಹೊತ್ತೊಯ್ದ ಕಿರಾತಕ ಕಳ್ಳ

ಡ್ರಾಪ್ ಕೇಳಿದ ದುಷ್ಕರ್ಮಿಯೊಬ್ಬ ನಂತರ ನೆಪ ಮಾಡಿ ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನಾಗವಾರ ಸಿಗ್ನಲ್ ಬಳಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಡ್ರಾಪ್ ಕೇಳಿದ ದುಷ್ಕರ್ಮಿಯೊಬ್ಬ ನಂತರ ನೆಪ ಮಾಡಿ ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನಾಗವಾರ ಸಿಗ್ನಲ್ ಬಳಿ ನಡೆದಿದೆ. 
ಸೆಪ್ಟೆಂಬರ್ 12 ರಂದು ಘಟನೆ ನಡೆದಿದೆ. ಈಜಿಪುರ ನಿವಾಸಿಯಾಗಿರುವ ಆರ್. ವೇಲು ಕಾರು ಚಾಲಕರಾಗಿದ್ದಾರೆ. 
ಸೆ.12 ರಾತ್ರಿ ಗೆಳೆಯರೊಂದಿಗೆ ನಾಗವಾರ ಸರ್ವಿಸ್ ರಸ್ತೆಯಲ್ಲಿರುವ ಬಾರ್'ಗೆ ಹೋಗಿದ್ದಾರೆ. ಬಳಿಕ 10.30ರ ಸುಮಾರಿಗೆ ಗೆಳೆಯನನ್ನು ಹೆಚ್'ಬಿಆರ್ ಲೇಔಟ್'ನ ಟೆಲಿಕಾಮ್ ಲೇಔಟ್ ಬಳಿ ಡ್ರಾಪ್ ಮಾಡಿದ್ದಾರೆ. 
ಬಳಿಕ ಹೆಚ್'ಬಿಆರ್ ಲೇಔಟ್ 5 ನೇ ಬ್ಲಾಕ್ ಬಳಿ ಸಿಗರೇಟ್ ಕೊಳ್ಳುವ ಸಲುವಾಗಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ 20-25 ವರ್ಷದ ಯುವಕ ಬಂದು ನಾಗವಾರ ಸಿಗ್ನಲ್ ಬಳಿ ಡ್ರಾಪ್ ಮಾಡುವಂತೆ ಬೇಡಿಕೊಂಡಿದ್ದಾನೆ. 
ಯುವಕನನ್ನು ನೋಡಿ ಅಯ್ಯೋ ಎನಿಸಿತು. ಹೀಗಾಗಿ ಡ್ರಾಪ್ ಮಾಡಲು ಒಪ್ಪಿಕೊಂಡೆ. ನಾಗಾರ ಸಿಗ್ನಲ್ ಬಳಿ ಬರುತ್ತಿದ್ದಂತೆಯೇ ವೀರಪ್ಪನಪಾಳ್ಯ ಜಂಕ್ಷನ್ ಬಳಿ ಇಳಿಯುವುದಾಗಿ ತಿಳಿಸಿದ. ವೀರಪ್ಪನಪಾಳ್ಯ ಬಳಿ ಹೋಗುತ್ತಿದ್ದಂತೆಯೇ ಯಾರೋ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆಂದು ಹೇಳಿದ. ಈ ವೇಳೆ ಆ ರೀತಿ ಏನೂ ಆಗಿಲ್ಲ ಎಂದು ಹೇಳಿದ್ದೆ. ಆದರೂ ಆತ ಅದೇ ರೀತಿ ಹೇಳಿದ. ಬಳಿಕ ಕಾರು ನಿಲ್ಲಿಸಿ ಏನಾಯಿತು ಎಂದು ನೋಡಲು ಇಳಿದೆ. ಈ ವೇಳೆ ದುಷ್ಕರ್ಮಿ ಕಾರನ್ನು ಚಲಾಯಿಸಿಕೊಂಡು ಹೊರಟುಹೋದ ಎಂದು ದೂರಿನಲ್ಲಿ ವೇಲು ಅವರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com