ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ-ನಾಮವಾರ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ತುಂಬು ಗರ್ಭೀಣಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ನಾಮವಾರ ಗ್ರಾಮದ 29 ವರ್ಷದ ಹರಿಕೃಷ್ಣ ವಡ್ಡರ್ ಹೈದರಾಬಾದ್ ನಲ್ಲಿ ವಾಸವಿದ್ದು 21 ವರ್ಷದ ಪತ್ನಿ ಅಂಬಿಕಾ ಜೊತೆ ಹೈದರಾಬಾದ್ ನಿಂದ ಕಲಬುರಗಿಗೆ ಬಂದು ಅಲ್ಲಿಂದ ತಮ್ಮ ಊರಿಗೆ ದಂಪತಿಗಳು ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದ್ದು ಹರಿಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದು ಅಂಬಿಕಾ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ.
ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮತ್ತೊಂದು ಬೈಕ್ ನಲ್ಲಿದ್ದ ರಾಮು, ನಾಗಪ್ಪ, ನಿಂಗಪ್ಪ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು ದಾನಮ್ಮ ದೇವಿಯ ದರ್ಶನ ಪಡೆದು ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.