ನಟ ಜಗ್ಗೇಶ್ ಮತ್ತು ಮಹಿಳಾ ಕಾರ್ಯಕರ್ತೆ ರೆಹನಾ ಫಾತಿಮಾ
ರಾಜ್ಯ
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಮಹಿಳಾ ಕಾರ್ಯಕರ್ತೆ ವಿರುದ್ದ ನಟ ಜಗ್ಗೇಶ್ ಈ ಪರಿ ಆಕ್ರೋಶ ವ್ಯಕ್ತಪಡಿಸಿದ್ದೇಕೆ?
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ಅಯ್ಯಪ್ಪ ಸ್ವಾಮಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿರುವ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ನಟ ಜಗ್ಗೇಶ್ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ಅಯ್ಯಪ್ಪ ಸ್ವಾಮಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿರುವ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ನಟ ಜಗ್ಗೇಶ್ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಿಸ್ ಆಫ್ ಲವ್ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ವಿರುದ್ಧ ನಟ ಜಗ್ಗೇಶ್ ಅವರು ಕಿಡಿಕಾರಿ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಹಾನಾ ಫಾತಿಮಾ ವಿರುದ್ಧ ಈ ಪರಿ ಜಗ್ಗೇಶ್ ಕೋಪಗೊಳ್ಳಲು ಅವರ ಒಂದು ಫೋಟೋ ಕಾರಣವಾಗಿದ್ದು, ಫೋಟೋದಲ್ಲಿ ರೆಹಾನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯಂತೆ ಪೋಸ್ ನೀಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪೋಟೋಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಟ್ವಿಟರ್ ನಲ್ಲಿ ಜಗ್ಗೇಶ್ ಹೇಳಿದ್ದೇನು?
ಅನ್ಯಧರ್ಮಿಯಳು ಈ ಅವತಾರದಲ್ಲಿ ಪೋಲಿಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನಮಾಡಿ ಸಾಧಿಸಿ ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್..ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿಪೆಟ್ಟಲ್ಲವೆ!ವಿನಾಶಕಾಲೆ ವಿಪರೀತ ಬುದ್ಧಿ!ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ!ಬ್ರಿಟಿಷರು ಮೊಘಲ್ ಗಳಿಗೆ ಬಗ್ಗದ ಹಿಂದೂ ಧರ್ಮ ಇಂಥವರಿಗಾ? ಜೈಹಿಂದ್ ಎಂದು ಬರೆದಿದ್ದಾರೆ.
ರೆಹನಾ ಫಾತಿಮಾ ಮುಸ್ಲಿಂ ಮಹಿಳೆಯಾಗಿಯೂ ಪೊಲೀಸ್ ಕೋಟೆಯ ಬೆಂಬಲದೊಂದಿಗೆ ಶಬರಿ ಮಲೆ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಶುಕ್ರವಾರ ದೇವಾಲಯದ ಮುಂಭಾಗ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅವರನ್ನು ಮತ್ತು ಜೊತೆಗಿದ್ದ ಆಂದ್ರ ಪ್ರದೇಶದ ಮೋಜೋ ಸುದ್ದಿವಾಹಿನಿ ಪತ್ರಕರ್ತೆ ಕವಿತಾ ಜಕ್ಕಲ್ ಅವರನ್ನು ಹಿಂದಕ್ಕೆ ಕಳುಹಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ