ಮೈಸೂರು: 65 ವರ್ಷದ ವೃದ್ಧೆ ಮೇಲೆ ಲೈಂಗಿಕ ಹಲ್ಲೆ ನಡೆಸಿ ಕೊಲೆ, ಆರೋಪಿ ಬಂಧನ

65 ವರ್ಷದ ವೃದ್ಧೆ ಮೇಲೆ ಆಕೆಯ ನೆರೆ ಮನೆಯವ ಲೈಂಗಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಮಂಡಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: 65 ವರ್ಷದ ವೃದ್ಧೆ ಮೇಲೆ ಆಕೆಯ ನೆರೆ ಮನೆಯವ ಲೈಂಗಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಭಾನುವಾರ ನಡೆದಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ವೃದ್ಧ ಮಹಿಳೆಯ ನೆರೆಮನೆಯವನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡು ಮೂಲದ ಸಲಿಯಮ್ಮ ಮೈಸೂರಿನ ತಿಲಕನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ನೌಕರಳಾಗಿದ್ದಳು. ಆರೋಪಿ ಮೂರ್ತಿ ಕೂಡ ಅಲ್ಲಿ ಕೂಲಿ ಕಾರ್ಮಿಕನಾಗಿದ್ದ. ಪಾನಮತ್ತನಾಗಿದ್ದ ಮೂರ್ತಿ ಸಲಿಯಮ್ಮ ಮೇಲೆ ಹಲ್ಲೆ ನಡೆಸಿದ್ದು ಇದರಿಂದ ಆಕೆ ಮೃತಪಟ್ಟಿದ್ದಾಳೆ.

ಪೊಲೀಸರು ಹೇಳುವ ಪ್ರಕಾರ, ಸಲಿಯಮ್ಮ ಕೆಲ ವರ್ಷಗಳ ಹಿಂದೆ ಮೈಸೂರಿಗೆ ತಮಿಳುನಾಡಿನಿಂದ ವಲಸೆ ಬಂದಿದ್ದಳು. ಅನಾರೋಗ್ಯಕ್ಕೀಡಾಗಿದ್ದಳು, ಕಣ್ಣು ಕೂಡ ಸರಿಯಾಗಿ ಕಾಣಿಸುತ್ತಿರಲಿಲ್ಲ. ತರಕಾರಿ ಮಾರುಕಟ್ಟೆ ಸಮೀಪ ರೈಲ್ವೆ ಹಳಿ ಹಿಂದೆ ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಅಕ್ಕಪಕ್ಕದ ಮನೆಯವರು ಆಕೆಗೆ ಆಹಾರ ನೀಡುವುದು ಇತ್ಯಾದಿ ಸಹಾಯ ಮಾಡುತ್ತಿದ್ದರು.

ಕಳೆದ ಭಾನುವಾರ ಪಕ್ಕದ ಮನೆಯವರೊಬ್ಬರು ಸಲಿಯಮ್ಮಳನ್ನು ಕಾಣಲೆಂದು ಹೋಗಿದ್ದರು. ಆಗ ಮೂರ್ತಿ ಆಕೆಯ ಮನೆಯಿಂದ ಹೊರಬಂದಿದ್ದ. ಪಕ್ಕದ ಮನೆಯವರು ಒಳಹೋಗಿ ನೋಡಿದಾಗ ಸಲಿಯಮ್ಮ ಶವವಾಗಿ ಬಿದ್ದಿದ್ದಳು. ಮದ್ಯಪಾನದಿಂದ ಸ್ಥಿಮಿತ ಕಳೆದುಕೊಂಡಿದ್ದ ಮೂರ್ತಿಯನ್ನು  ಸ್ಥಳೀಯರು ಚೆನ್ನಾಗಿ ಹೊಡೆದು ಪೊಲೀಸರಿಗೊಪ್ಪಿಸಿದರು. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com