'ಗೌರಿ ಲಂಕೇಶ್ ಪತ್ರಿಕೆ' ಈಗ 'ನ್ಯಾಯಪಥ': ಹೊಸ ಹೆಸರು, ಅದೇ ಮೌಲ್ಯ

ವರ್ಷದ ಹಿಂದೆ ಗೌರಿ ಲಂಕೇಶ್ ಹತ್ಯೆ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆ ಇದೀಗ ಹೊಸ ಅವತಾರದೊಂದಿಗೆ ಮರು ಚಾಲನೆ ಪಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವರ್ಷದ ಹಿಂದೆ ಗೌರಿ ಲಂಕೇಶ್ ಹತ್ಯೆ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆ ಇದೀಗ ಹೊಸ ಅವತಾರದೊಂದಿಗೆ ಮರು ಚಾಲನೆ ಪಡೆಯಲಿದೆ.
ಖ್ಯಾತ ಪತ್ರಕರ್ತೆ ಮತ್ತು ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ ವರ್ಷ ಕಳೆದಿರುವ ಹಿನ್ನಲೆಯಲ್ಲಿ ಅವರ ಸಾವಿನ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆಗೆ ಮರು ಜನ್ಮ ನೀಡಲಾಗಿದೆ. ಹೊಸ ಅವತಾರದಲ್ಲಿ ಗೌರಿ ಲಂಕೇಶ್ ಪತ್ರಿಕೆ ಇಂದು ಲೋಕಾರ್ಪಣೆಯಾಗಲಿದೆ. ಅಂತೆಯೇ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಅವರ ಸಿದ್ಧಾಂತ ಮತ್ತು ಪರಂಪರೆಯನ್ನು ಮುಂದುವರೆಸಲು ಪತ್ರಿಕೆ ನಿರ್ಧರಿಸಿದೆ. ಅವರ ಆಪ್ತ ಸ್ನೇಹಿತರು, ಸಹೋದ್ಯೋಗಿಗಳು ಒಗ್ಗೂಡಿ ಪತ್ರಿಕೆಯನ್ನು ಹೊರ ತಂದಿದ್ದು, ಪತ್ರಿಕೆಗೆ ನ್ಯಾಯಪಥ ಎಂಬ ಶೀರ್ಷಿಕೆ ಇಡಲಾಗಿದೆ. ಅಂತೆಯೇ ಪತ್ರಿಕೆಯಲ್ಲಿ 'ನನ್ನ ಧನಿ ಅಡಗಿಸಲು ಸಾಧ್ಯವಿಲ್ಲ' ಎಂಬ ಬರಹದೊಂದಿಗೆ ಗೌರಿ ಹಂತಕರ ವಿರುದ್ಧವೂ ಕಿಡಿಕಾರಲಾಗಿದೆ.
ಗೌರಿ ಲಂಕೇಶ್ ಪತ್ರಿಕೆ ಕೊನೆಯ ಬಾರಿಗೆ ಅವರ ಹತ್ಯೆ ನಂತರ ಪ್ರಕಟವಾಗಿತ್ತು. ಆ ಬಳಿಕ ಪತ್ರಿಕೆ ಮುದ್ರಣ ಮತ್ತು ಪ್ರಸಾರ ಸ್ಥಗಿತವಾಗಿತ್ತು. ಇದೀಗ ಅವರ ಪುಣ್ಯತಿಥಿ ಹಿನ್ನಲೆಯಲ್ಲಿ ಪತ್ರಿಕೆಗೆ ಪುನರ್ ಚಾಲನೆ ನೀಡಲಾಗಿದೆ. ಇಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತನಾಮ ವಿಚಾರವಾದಿಗಳು ಮತ್ತು ಹೋರಾಟಗಾರರು ಪಾಲ್ಗೊಳ್ಳಲ್ಲಿದ್ದಾರೆ. ಅಂತೆಯೇ ಇದೇ ಕಾರ್ಯಕ್ರಮದಲ್ಲಿ ಪತ್ರಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com