ಸಮುದ್ರ ಮಧ್ಯದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಬೆಂಕಿ: 1 ಸಾವು, 7 ಮಂದಿಗೆ ಗಾಯ

ಮೀನುಗಾರಿಕೆ ದೋಣಿಯಲ್ಲಿ ಸಮುದ್ರ ಮಧ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದ್ದರಿಂದ ಒಬ್ಬರು ಮೃತಪಟ್ಟು, ಏಳು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಾರವಾರದ ಬಳಿ ನಡೆದಿದೆ.
ದೋಣಿಯಲ್ಲಿ ಬೆಂಕಿ
ದೋಣಿಯಲ್ಲಿ ಬೆಂಕಿ

ಕಾರವಾರ: ಮೀನುಗಾರಿಕೆ ದೋಣಿಯಲ್ಲಿ  ಸಮುದ್ರ ಮಧ್ಯದಲ್ಲಿ  ಆಕಸ್ಮಿಕ ಬೆಂಕಿ ಕಾಣಸಿಕೊಂಡಿದ್ದರಿಂದ  ಒಬ್ಬರು ಮೃತಪಟ್ಟು, ಏಳು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಆ ಹಡಗಿನಲ್ಲಿ 26 ಮಂದಿ ಮೀನುಗಾರಿದ್ದರು ಎನ್ನಲಾಗಿದ್ದು, ಸಮೀಪದಲ್ಲಿಯೇ ಮತ್ತೊಂದು ಹಡಗಿನಲ್ಲಿದ್ದ  ಇತರ ಮೀನುಗಾರರು  ಅವರೆಲ್ಲರನ್ನೂ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಜಲಾಪದ್ಮ ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಹಡಗು ನಿನ್ನೆ ಬೆಳಿಗ್ಗೆ ಮೀನುಗಾರಿಕೆಗಾಗಿ ಹೋಗಿದ್ದು, ವಾಪಾಸ್ಸಾಗುತ್ತಿದ್ದಾಗ ಬ್ಯಾಟರಿ ಸ್ಪೂಟಗೊಂಡು  ಬೆಂಕಿ ಉಂಟಾಗಿದೆ. ಇದರಿಂದಾಗಿ ಆತಂಕಕೊಳಗಾದ ಕೆಲವು ಮೀನುಗಾರರು ಸಮುದ್ರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಹಡಗಿನ ಚಾಲಕ ದೀಪಕ್ ಹರಿಕಾಂತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಬ್ಯಾಟರಿ ಸ್ಪೋಟಗೊಂಡ ಕೆಲವೇ ಸೆಕೆಂಡ್ ಗಳಲ್ಲಿ ಬೆಂಕಿ ಉಂಟಾಯಿತು. ನೌಕ ಹಡಗು ಸ್ಥಳಕ್ಕೆ ಆಗಮಿಸಿ ಬೆಂಕಿ ನಿಯಂತ್ರಿಸಿತು. ಇತರ ಮೀನುಗಾರರು ತಮ್ಮನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಜಲಾಪದ್ಮ ಹತ್ತಿರದಲ್ಲಿದ್ದ ತಮಿಳುನಾಡಿನ ಮೀನುಗಾರರು  ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮೃತನ ಹೆಸರು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏಳು ಮಂದಿ ಗಾಯಾಳುಗಳ ಪೈಕಿ ಐವರು ಒಡಿಶಾ ಮತ್ತಿಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇಬ್ಬರು ಶೇ, 50 ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಭಾರತೀಯ ಕರಾವಳಿ ಭದ್ರತಾ ಹಡಗು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮೃತಪಟ್ಟ ಮೀನುಗಾರನ ಮೃತದೇಹವನ್ನು ತರಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ. ನಾಗರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com