ವಿಚಾರವಾದಿಗಳ ಹತ್ಯೆಯಲ್ಲಿ 'ಕೇಂದ್ರ'ದ ಕೈವಾಡವಿದೆ: ಶಾಸಕ ಜಿಗ್ನೇಶ್ ಮೇವಾನಿ

ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರದ ಕೈವಾಡವಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
ಜಿಗ್ನೇಶ್ ಮೇವಾನಿ
ಜಿಗ್ನೇಶ್ ಮೇವಾನಿ
ಬೆಂಗಳೂರು: ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರದ ಕೈವಾಡವಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
ಗೌರಿ ಪುಣ್ಯತಿಥಿ ನಿಮಿತ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ವಿವಿಧೆಡೆ ನಡೆದ ವಿಚಾರವಾದಿಗಳ ಹತ್ಯೆಯಲ್ಲಿ ಖಂಡಿತಾ ದೆಹಲಿ ಮತ್ತು ನಾಗ್ಪುರ ಕೈವಾಡವಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರ ಮತ್ತು ಆರ್ ಎಸ್ಎಸ್ ವಿರುದ್ಧ ಕಿಡಿ ಕಾರಿದರು.
ಮಹಾರಾಷ್ಟ್ರದಲ್ಲಿ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್, ಇತ್ತ ಕರ್ನಾಟಕದಲ್ಲಿ ಎಂಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದೆ. ಖಂಡಿತಾ ಇದರಲ್ಲಿ ಕೇಂದ್ರ ಸರ್ಕಾರ ಮತ್ತು ಆರ್ ಎಸ್ಎಸ್ ಕೈವಾಡವಿರಬಹುದು. ನಿಜ ಹೇಳಬೇಕು ಎಂದು ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರ ಮತ್ತು ಆರ್ ಎಸ್ಎಸ್ ನ ಕೈವಾಡವಿರುದು ತಮಗೆ ಅಚ್ಚರಿಯೇನು ಮೂಡಿಸಿಲ್ಲ, ಆದರೆ ಆಘಾತವಾಗಿದೆ ಎಂದು ಮೇವಾನಿ ಹೇಳಿದರು.
ದೆಹಲಿ ಮತ್ತು ನಾಗ್ಪುರದಲ್ಲಿ ಕುಳಿತಿರುವ ಕೆಲವರು ವಿಚಾರವಾದಿಗಳ ಹತ್ಯೆಕೋರರನ್ನು ನಿಯಂತ್ರಿಸುತ್ತಿದ್ದು, ಕೇಂದ್ರ ಸರ್ಕಾರಿ ಪ್ರಾಯೋಜಿತ ಮಿಷನರಿಗಳ ಸಹಭಾಗಿತ್ವವಿಲ್ಲದೇ ಇದು ಸಾಧ್ಯವಿಲ್ಲ. ಹೀಗಾಗಿ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ. ವಿಚಾರವಾದಿಗಳ ಹತ್ಯೆ ಹಿಂದನ ಉದ್ದೇಶವನ್ನು ನಾವು ಅರಿಯಲೇಬೇಕು ಎಂದು ಹೇಳಿದರು.
ಕರ್ನಾಟಕದ ಎಸ್ ಐಟಿಯಿಂದ ಅತ್ಯುತ್ತಮ ಕಾರ್ಯನಿರ್ವಹಣೆ
ಇನ್ನು ಗೌರಿ ಲಂಕೇಶ್ ಮತ್ತು ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಕಾರ್ಯವನ್ನು ಶ್ಲಾಘಿಸಿರುವ ಮೇವಾನಿ, ಎಸ್ ಐಟಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದ ವಿಚಾರವಾದಿಗಳ ಹತ್ಯೆ ಪ್ರಕರಣದ ತನಿಖಾ ಜವಾಬ್ದಾರಿಯನ್ನೂ ಕೂಡ ಎಸ್ ಐಟಿಗೆ ವಹಿಸಬೇಕು ಎಂದು ಮೇವಾನಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com