
ಧಾರವಾಡ: ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಗೂ ಪತ್ನಿಯ ಪ್ರಣಯದ ಕ್ಷಣದ ವಿಡಿಯೊ ಕ್ಲಿಪ್ ವೊಂದನ್ ಅಪ್ ಲೋಡ್ ಮಾಡಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿರುವ ಘಟನೆ ಧಾರವಾಡದ ಗ್ರಾಮವೊಂದರಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರಿಗೆ ಗೊತ್ತಾಗಿ ವ್ಯಕ್ತಿ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಇದೀಗ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.
ಧಾರವಾಡದ ಉಪ್ಪಿನಬೆಟಗೆರಿ ಗ್ರಾಮದಲ್ಲಿ ನೆಲೆಸಿರುವ ದಂಪತಿ ತಮ್ಮ ಪ್ರಣಯದ 7 ನಿಮಿಷಗಳ ವಿಡಿಯೊವನ್ನು ಪತಿ ಸೋಷಿಯಲ್ ಮೀಡಿಯಾ ಗ್ರೂಪ್ ನಲ್ಲಿ ಅಪ್ ಲೋಡ್ ಮಾಡಿದ್ದ. ಈ ವಿಡಿಯೊ ಸೆಪ್ಟೆಂಬರ್ 5ರಂದು ವೈರಲ್ ಆಗಿತ್ತು. ಈ ಸಂಬಂಧ ಗರಗ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಯ ಪತ್ನಿಯನ್ನು ಪೊಲೀಸರು ತನಿಖೆ ನಡೆಸಿದ್ದಾರೆ. ಮಹಿಳೆಗೆ ಈ ಘಟನೆ ನಡೆದ ನಂತರ ಆಘಾತವಾಗಿದ್ದು ಅವರ ಕುಟುಂಬದವರ ಯಾರ ಸಂಪರ್ಕಕ್ಕೂ ಆರೋಪಿ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
''ಆರೋಪಿಯ ಪತ್ನಿ ಆಘಾತಕ್ಕೊಳಗಾಗಿದ್ದಾಳೆ, ವಿಡಿಯೊ ವೈರಲ್ ಆದರೆ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಈಗಾಗಲೇ ಹಲವು ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ವಿಡಿಯೊ ಶೇರ್ ಆಗಿದೆ'' ಎಂದು ಪೊಲೀಸರು ಹೇಳುತ್ತಾರೆ.
ವಿಡಿಯೊ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿರುವ ಗ್ರೂಪ್ ನಲ್ಲಿ ಶೇರ್ ಆಗಿತ್ತು. ಆಗ ಈ ಬಗ್ಗೆ ಆರೋಪಿಯನ್ನು ಕೇಳಿದಾಗ ಆಕಸ್ಮಿಕವಾಗಿ ವಿಡಿಯೊ ಶೇರ್ ಆಗಿ ಹೋಗಿದೆ ಎಂದು ಹೇಳಿ ಗ್ರೂಪ್ ನಿಂದ ಕೂಡಲೇ ತೆಗೆದನು ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಆತ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಏಕೆ ಅಪ್ ಲೋಡ್ ಮಾಡಿದ ಎಂದು ಗೊತ್ತಾಗುತ್ತಿಲ್ಲ, ಆತನ ಮೊಬೈಲ್ ಫೂಟ್ ಪ್ರಿಂಟ್ಸ್ ನ್ನು ಪತ್ತೆಹಚ್ಚಿ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ವಿಚಾರಿಸುತ್ತಿದ್ದೇವೆ. ಸೈಬರ್ ಕಾನೂನಿನಡಿಯಲ್ಲಿ ಕೇಸು ದಾಖಲಾಗಿದ್ದು ಗರಗ್ ಪೊಲೀಸರು ಸೆಕ್ಷನ್ 292ರಡಿಯಲ್ಲಿ ಕೇಸು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement