ಬೆಂಗಳೂರು : ಲಂಚ ಪ್ರಕರಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಪೇದೆಗಳ ಬಂಧನ !

ಲಂಚ ಆರೋಪದಲ್ಲಿ ಬಾಣಸವಾಡಿಯ ಪೊಲೀಸ್ ಇನ್ಸ್ ಪೆಕ್ಟರ್ ಮುನಿಕೃಷ್ಣ ಹಾಗೂ ಕಾನ್ಸ್ ಟೇಬಲ್ ಗಳಾದ ಉಮೇಶ್ ಮತ್ತು ಅಶ್ರಪ್ ಎಂಬವರನ್ನು ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಲಂಚ ಆರೋಪದಲ್ಲಿ ಬಾಣಸವಾಡಿಯ ಪೊಲೀಸ್ ಇನ್ಸ್  ಪೆಕ್ಟರ್ ಮುನಿಕೃಷ್ಣ ಹಾಗೂ ಕಾನ್ಸ್ ಟೇಬಲ್ ಗಳಾದ ಉಮೇಶ್ ಮತ್ತು ಅಶ್ರಪ್ ಎಂಬವರನ್ನು   ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು  ಬಂಧಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ದಳ ಸ್ಥಾಪನೆಯಾದಾಗಿನಿಂದ  ಇದೇ ಮೊದಲ ಬಾರಿಗೆ ಕಾನ್ಸ್ ಟೇಬಲ್  ರಾಂಕಿಗಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಯನ್ನು  ಬಂಧಿಸಲಾಗಿದೆ.

 ಮೂರು ದಿನಗಳ ಹಿಂದಷ್ಟೇ ನಟೊರಿಯಸ್ ಸರಗಳ್ಳರ ಮೇಲೆ ಗುಂಡಿನ ದಾಳಿ ನಡೆಸಿ ಸುದ್ದಿಯಾಗಿದ್ದ ಇನ್ಸ್ ಪೆಕ್ಟರ್ ಮುನಿಕೃಷ್ಣ, ಇದೀಗ ಲಂಚ ಸ್ವೀಕಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಇನ್ಸ್ ಪೆಕ್ಟರ್ ಪರವಾಗಿ ಕಾನ್ಸ್ ಟೇಬಲ್ ಉಮೇಶ್ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾನೆ.  ಉಮೇಶ್ ಬಂಧನದ ನಂತರ ಇನ್ಸ್ ಪೆಕ್ಟರ್ ಮುನಿಕೃಷ್ಣ ಹಾಗೂ ಅಶ್ರಪ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಾಣಸವಾಡಿಯಲ್ಲಿ ಸ್ನೊಕರ್ ಅಕಾಡೆಮಿ  ನಡೆಸಬೇಕಾದರೆ 80 ಸಾವಿರ ರೂ ಲಂಚ ನೀಡುವಂತೆ  ಮುನಿಕೃಷ್ಣ ಬೇಡಿಕೆ ಇಟ್ಟಿದ್ದರು. ಅವರ ಪರವಾಗಿ ಕಾನ್ಸ್ ಟೇಬಲ್ ಗಳಾದ ಉಮೇಶ್ ಹಾಗೂ ಅಶ್ರಪ್ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಆದರೆ, ಇಷ್ಟು ಪ್ರಮಾಣದ ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ನೊಕರ್ ಅಕಾಡೆಮಿ  ಎಸಿಬಿಗೆ ದೂರು ನೀಡಿತ್ತು

ಕಾನ್ಸ್ ಟೇಬಲ್ ಗಳು ಲಂಚ ಸ್ವೀಕರಿಸುವಾಗ  ಭ್ರಷ್ಟಾಚಾರ  ನಿಯಂತ್ರಣ ದಳದ  ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಸಿಪಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ,  ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com