ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಬಿಬಿಎಂಪಿ ಆದೇಶ!

ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.

 ಕಲ್ಯಾಣ ಮಂಟಪಗಳಲ್ಲಿ ದೊಡ್ಡ ಮೊತ್ತದ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.   ಕಡಿಮೆ ಬೆಲೆಯ ಕಾರಣಕ್ಕೆ  ಪ್ಲಾಸ್ಟಿಕ್ ತಟ್ಟೆ, ಕಪ್ ಮತ್ತಿತರ ವಸ್ತುಗಳನ್ನು ಬಳಸಲು ಮುಂದಾಗುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ

ಕ್ಯಾಟರಿಂಗ್ ಸೇವೆ ಒದಗಿಸುವ  ಅಥವಾ ಮನೆಯಿಂದಲೇ ಆಹಾರ ಪೂರೈಸುವ ಎಲ್ಲರಿಗೂ   ಇದು ಅನ್ವಯವಾಗಲಿದೆ.

ಒಂದು ವೇಳೆ ಗ್ರಾಹಕರು ಅಥವಾ ಅಡುಗೆಯವರು ದೂರಿಗೆ ಒಳಪಡದಿದ್ದಲ್ಲಿ  ಕಲ್ಯಾಣ ಮಂಟಪದ  ಆಡಳಿತ ಮಂಡಳಿಯೇ ಜವಾಬ್ದಾರಿ ಹೊರಬೇಕಾಗುತ್ತದೆ.  ಇದರ ಜೊತೆಗೆ ಕಲ್ಯಾಣ ಮಂಟಪದಲ್ಲಿ ಪ್ಲಾಸ್ಟಿಕ್  ನಿಂದ ಮಾಡಿಲ್ಲದಂತಹ  ತಟ್ಟೆ, ಚಮಚ, ಕಪ್ ಗಳನ್ನು  ಅತಿಥಿಗಳು ಹಾಗೂ ಅಡುಗೆಯವರಿಗೆ  ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಕೆಲಸಗಾರರು ಗ್ಲೋ ಬಳಸಿ ತ್ಯಾಜ್ಯ ನಿರ್ವಹಣೆ ಮಾಡುವಂತಹ , ಅಥವಾ ಬಯೋ ಗ್ಯಾಸ್, ಮತ್ತಿತರ ಸೌಕರ್ಯಗಳನ್ನು  ವ್ಯವಸ್ಥೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com