ಭಾರತದ ಆತ್ಮಹತ್ಯೆ ರಾಜಧಾನಿಯಾಗಿ ಮುಂದುವರಿಯುತ್ತಿದೆಯೇ ಸಿಲಿಕಾನ್ ಸಿಟಿ ಬೆಂಗಳೂರು?

ಈ ವರ್ಷದ ಜುಲೈ ವರೆಗೂ ಬೆಂಗಳೂರು ನಗರದಲ್ಲಿ 1,921 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. 2017ನೇ ವರ್ಷದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ವರ್ಷದ ಜುಲೈ ವರೆಗೂ ಬೆಂಗಳೂರು ನಗರದಲ್ಲಿ  1,921 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. 2017ನೇ ವರ್ಷದಲ್ಲಿ ಶೇ, 50 ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಸಾವಿಗೆ ಶರಣಾಗಿರುವ ವರ್ಷವಾಗಿದೆ. 1,921 ಮಂದಿ ಸಾವಿನಲ್ಲಿ 793 ಮಂದಿ ಪುರುಷರು, ಮತ್ತು 399 ಮಂದಿ ಮಹಿಳೆಯರಾಗಿದ್ದರು. 
ರಾಷ್ಟ್ರೀಯ ಅಪರಾಥ ದಾಖಲೆಗಳ ಸಂಸ್ಥೆ ಪ್ರಕಾರ 2004 ರಿಂದ 2014 ರವರೆಗೆ ಶೇ.15.8 ಪಟ್ಟು ಹೆಚ್ಚಾಗಿದೆ. ಇದರಲ್ಲಿ ಹೆಚ್ಚು ವಯಸ್ಕರೇ ಬಲಿಯಾಗುತ್ತಿದ್ದಾರೆ,  ಹಲವು ಅವಕಾಶಗಳನ್ನು ನೀಡುವ ಬೆಂಗಳೂರು ಅಷ್ಟೇ ಒತ್ತಡ ಸ್ಪರ್ಧೆ ಕೊಡುತ್ತಿದೆ ಎಂದು ಹೇಳಿದೆ.
2017-18ರಲ್ಲಿ 720 ಕರೆಗಳು ಬಂದಿದ್ದು, ಅದರಲ್ಲಿ  15 ಮಂದಿ ತಮಗೆ ಆತ್ಮಹತ್ಯೆ ಯೋಚನೆ ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಯುವ ಹೆಲ್ಪ್ ಲೈನ್  ಸಾ-ಮುದ್ರ ಸಂಸ್ಥಾಪಕಿ ಭಾರತೀ ಸಿಂಗ್ ಹೇಳಿದ್ದಾರೆ.
ಹಲವು ಬಾರಿ ನಮಗೆ ಯುವಜನತೆ ಕರೆ ಮಾಡುತ್ತಾರೆ.ತಮಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ. ತಮ್ಮ ಪೋಷಕರ ಆಸೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಕರೆ ಮಾಡುತ್ತಾರೆ ಎಂದು ಹೇಳಿದ್ದಾರೆ.
20ನೇ ಶತಮಾನದಲ್ಲಿ ಬೆಂಗಳೂರು ಭಾರತದ ಆತ್ಮಹತ್ಯೆ ರಾಜಧಾನಿ ಎಂಬ ಬಿರುದು ಪಡೆದುಕೊಂಡಿದೆ ಎಂದು ಮನೋವೈದ್ಯ ಆರ್. ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಸಮಾಜ ಎಚ್ಚರಗೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಂಡು ಪೋಷಕರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com