ಗಾಂಧಿಗೂ ತಟ್ಟಿದ ಬಂದ್ ಬಿಸಿ: ಆಟೋ ಚಾಲಕರ ವಸೂಲಿ ದಂಧೆ; ಮೆಜೆಸ್ಟಿಕ್ ನಿಂದ ಪ್ರೇಜರ್ ಟೌನ್ ಗೆ 700 ರೂ.!

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಂತೆ ವೇಷಭೂಷಣ ತೊಟ್ಟಿದ್ದ 73ವರ್ಷದ ಆಗಸ್ಟೈನ್ ಡಿ, ಅಲ್ಮೇಡಿಯಾ ಭಾರತಾದ್ಯಂತ ಸಂಚರಿಸುತ್ತಾರೆ, ಸಾರ್ವಜನಿಕ ...
ಗಾಂಧಿಯಂತೆ ವೇಷ ಧರಿಸಿರುವ  ಅಲ್ಮೈಡಿಯಾ
ಗಾಂಧಿಯಂತೆ ವೇಷ ಧರಿಸಿರುವ ಅಲ್ಮೈಡಿಯಾ
ಬೆಂಗಳೂರು:  ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಂತೆ ವೇಷಭೂಷಣ ತೊಟ್ಟಿದ್ದ  73ವರ್ಷದ ಆಗಸ್ಟೈನ್ ಡಿ, ಅಲ್ಮೇಡಿಯಾ  ಭಾರತಾದ್ಯಂತ ಸಂಚರಿಸುತ್ತಾರೆ, ಸಾರ್ವಜನಿಕ ಸಮಾರಂಭಗಳಲ್ಲಿ ಗಾಂಧಿಯಂತೆ ವೇಷ ತೊಟ್ಟು ಎರಡು ಮೂರು ಗಂಟೆ  ನಿಲ್ಲುತ್ತಾರೆ, ಜನಿವಾರ ಧರಿಸುವ ಅವರು ರಂಜಾನ್ ಸಮಯದಲ್ಲಿ ಉಪವಾಸ ಮಾಡುತ್ತಾರೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಗುಜರಾತ್ ನ ಪೋರ ಬಂದರಿನಲ್ಲಿ  ಅಕ್ಟೋಬರ್ 2 ರಂದು ಭಾಗವಹಿಸಲಿದ್ದಾರೆ. 
ಆದರೆ ಅವರ ದುರಾದೃಷ್ಟ ನಿನ್ನೆ ಬಂದ್ ಇದ್ದ ದಿನ ಬೆಂಗಳೂರಿಗೆ ಆಗಮಿಸಿದ್ದರು, ಟಿಪಿಕಲ್ ಬೆಂಗಳೂರು ಆಟೋ ಚಾಲಕರ ದುರಾಸೆಯ ಅನುಭವ ಕೂಡ ಗಾಂಧಿಗೆ ತಟ್ಟಿತು. ಅವರು ಗಾಂಧಿ ಯಂತೆ ಕಾಣಿಸಿದರೂ ಆಟೋ ಚಾಲಕ ಅವರಿಗೆ ಯಾವುದೇ ರಿಯಾಯಿತಿ ನೀಡಲಿಲ್ಲ, 
ಮೆಜೆಸ್ಟಿಕ್  ನಿಂದ ಪ್ರೇಜರ್ ಟೌನ್ ಗೆ 7 ಕಿಮೀ ಆಗಲಿದ್ದು, ಅದಕ್ಕಾಗಿ 700 ರು ಕೇಳಿದ್ದಾರೆ,. ಆದರೆ ಅವರು ಕೊಡಲು ನಿರಾಕರಿಸಿದ್ದಾರೆ, 
1945 ರಲ್ಲಿ ಜನಿಸಿದ ಅಲ್ಮೈಡಿಯಾ ಬೆಳೆದದ್ದೆಲ್ಲಾ ಮುಂಬಯಿಯಲ್ಲಿಸ 9ನೇ ತರಗತಿ ವರೆಗೂ ಓದಿರುವ ಅವರು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. ಹಡಗು ಕಂಪನಿಗೆ ಅಂಜರ್ ವಾಟರ್ ವೆಲ್ಡರ್ ಆಗಿ ಕೆಲಸಕ್ಕೆ ಸೇರಿದರು, 2001 ರವರೆಗೂ ಕೆಲಸ ಮಾಡಿದ ಅವರು, ನಿವೃತ್ತಿ ತೆಗೆದುಕೊಂಡರು. ನಂತರ ಬೇರೆ ಬೇರೆ ಕಡೆ ಕೆಲಸ ಮಾಡಿ ಅಲ್ಲಿಂದಲೂ ಹೊರ ಬಿದ್ದರು,
ಕಳೆದ ಕೆಲವು ವರ್ಷಗಳಿಂದ ದೇಶದ ಹಲವು ಭಾಗಗಳಲ್ಲಿ ಸಂಚರಿಸುತ್ತಿರುವ ಅವರು, ಮಹಿಳಾ ಸಬಲೀಕರಣಸ ನಿರುದ್ಯೋಗ ಸಮಸ್ಯೆ ಮತ್ತು ಚೀನಾ ಉತ್ಪನ್ನಗಳನ್ನು ನಿಷೇಧಿಸುವಂತೆ ಪ್ರಚಾರ ಮಾಡುತ್ತಾರೆ,
ಅವನೊಬ್ಬ ಕ್ಷೌರಿಕ ನಾನು ಗಾಂಧಿಯಂತೆ ಕಾಣಿಸುತ್ತೇನೆ ಎಂದು ಹೇಳಿದ್ದ ಅಂದಿನಿಂದ ನಾನು ಮಹಾತ್ಮ ಗಾಂಧಿಯಂತೆ ವೇಷ ಭೂಷಣ ಧರಿಸಿಕೊಳ್ಳುತ್ತೇನೆ. ನಾನು ಹೇಳಿದ್ದನ್ನು ಜನರು ಕೇಳಿಸಿಕೊಳ್ಳಲು ಇದೊಂದು ಸರಳ ವಿಧಾನ. ಬೇರೆ ಪ್ರಯತ್ನದಿಂದ ಇದೊಂದು ಸಾಧ್ಯವಾಗುವುದಿಲ್ಲ.
ಕರ್ನಾಟಕದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾರವಾರ, ಮೈಸೂರು, ಮತ್ತಿತರ ಕಡೆಗಳಲ್ಲಿ ಸಂಚರಿಸಿದ್ದಾರೆ. ಮೈಸೂರಿನಲ್ಲಿದ್ದೆ ಅಲ್ಲಿಂದ ಬೆಂಗಳೂರಿಗೆ ಸೋಮವಾರ ಬೆಳಗ್ಗೆ ಬಂದಿದ್ದೇನೆ, ನನ್ನ ಕೋಲು ಮುರಿಯಿತು. ಪ್ರೇಜರ್ ಟೌನ್ ನಲ್ಲಿರುವ ಬಂಬೂ ಬಜಾರ್ ನಲ್ಲಿ ಅದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ, ನಾನು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗಬೇಕಿತ್ತು. ಆದರೆ ಆಟೋ ಚಾಲಕ 700 ರು ಹಣ ಕೇಳಿದ. ಅದು ನನಗೆ ದುಬಾರಿಯಾಗಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ಪೂರ್ವ ರೈಲ್ವೆ ನಿಲ್ದಾಣ ದೊಡ್ಡದಲ್ಲ, ಹಲವು ಎಕ್ಸ್ ಪ್ರೆಸ್ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿಯಂತೆ ವೇಷ ಧರಿಸಿರುವ ಅಲ್ಮೇಡಿಯಾ ಕನ್ನಡಕ, ಸಣ್ಣ ಚೀಲ, ಕೋಲು ಹಿಡಿದಿರುವ ಅವರು ಬರಿಗಾಲಿನಲ್ಲೇ ನಡೆಯುತ್ತಾರೆ.
ಹೆಂಡತಿ ಹಾಗೂ ಮಗಳ ಜೊತೆ ಮಾತನಾಡಲು ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ, ನನ್ನಬಳಿ ಕಾರು ಇಲ್ಲ, ಯಾವುದೇ ಐಷಾರಾಮಿ ಜೀವನ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ., ಕಳೆದ 40 ವರ್ಷಗಳಿಂದ ನಾನು ಬೆಳಗಿನ ಉಪಹಾರ ಸೇವಿಸುತ್ತಿಲ್ಲ. ಅದರ ಹಣ ಉಳಿಸಿ ನನ್ನ ಪ್ರಯಾಣದ ಖರ್ಚಿಗೆ ಬಳಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com