ಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ-ಸಚಿವರ ಪ್ರಯಾಣ ಭತ್ಯೆ 24 ಕೋಟಿ ರೂ: ಸಿಎಂ ಗಿಂತಲೂ ಹೆಚ್ಚು ಟಿ.ಎ ಪಡೆದ ಸಚಿವರ್ಯಾರು?

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ಬರೊಬ್ಬರಿ 24 ಕೋಟಿ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂಬುದು ಆರ್ ಟಿಐ ಮೂಲಕ ತಿಳಿದುಬಂದಿದೆ.
ಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ-ಸಚಿವರ ಪ್ರಯಾಣ ಭತ್ಯೆ 24 ಕೋಟಿ ರೂ: ಸಿಎಂ ಗಿಂತಲೂ ಹೆಚ್ಚು ಟಿ.ಎ ಪಡೆದ ಸಚಿವರ್ಯಾರು?
ಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ-ಸಚಿವರ ಪ್ರಯಾಣ ಭತ್ಯೆ 24 ಕೋಟಿ ರೂ: ಸಿಎಂ ಗಿಂತಲೂ ಹೆಚ್ಚು ಟಿ.ಎ ಪಡೆದ ಸಚಿವರ್ಯಾರು?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ಬರೊಬ್ಬರಿ 24 ಕೋಟಿ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂಬುದು ಆರ್ ಟಿಐ ಮೂಲಕ ತಿಳಿದುಬಂದಿದೆ. 
ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗದಾದ್ ಎಂಬುವವರು ಸಲ್ಲಿಸಿದ್ದ ಆರ್ ಟಿಐ ಮಾಹಿತಿಗೆ ನೀಡಲಾಗಿರುವ ಉತ್ತರದ ಪ್ರಕಾರ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಒಟ್ಟಾರೆ 24 ಕೋಟಿ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದು, ಈ ಪೈಕಿ ಯುಟಿ ಖಾದರ್ ಅತಿ ಹೆಚ್ಚು ಅಂದರೆ 1.56 ಕೋಟಿ ರೂಪಾಯಿಗಳಿಗೆ ಟಿ.ಎ ಬಿಲ್ ನ್ನು ಕ್ಲೈಮ್ ಮಾಡಿದ್ದಾರೆ. 
ನಂತರದ ಸ್ಥಾನದಲ್ಲಿ ಮಾಜಿ ಅರಣ್ಯ ಸಚಿವ ರಮಾನಾಥ್ ರೈ ಇದ್ದು 1.52 ಕೋಟಿ ರೂಪಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಟಿಬಿ ಜಯಚಂದ್ರ 99.72 ಲಕ್ಷ ರೂಪಾಯಿಗಳಿಗೆ ಟಿ.ಎ ಕ್ಲೈಮ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗಿಂತ ಈ ಮೂವರೂ ಸಚಿವರು ಕ್ಲೈಮ್ ಮಾಡಿದ್ದು, ಮುಖ್ಯಮಂತ್ರಿಯಾಗಿದ್ದರೂ ಸಿಎಂ ಸಿದ್ದರಾಮಯ್ಯ 53.82 ಲಕ್ಷ ರೂಪಾಯಿಗಳನ್ನು ಕ್ಲೈಮ್ ಮಾಡಿದ್ದಾರೆ.
ಸಾಮಾನ್ಯವಾಗಿ ಖಾಸಗಿ ವಾಹನಗಳಲ್ಲಿ ಪ್ರತಿ ಕಿ.ಮೀ 15 ರೂಪಾಯಿ ದರ ವಿಧಿಸಲಾಗುತ್ತದೆ. ಆದರೆ ಸಚಿವರಿಗೆ ಪ್ರತಿ ಕಿ.ಮೀ ಗೆ 30 ರೂಪಾಯಿ ಪ್ರಯಾಣ ಭತ್ಯೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com