ಬಿಎಂಟಿಸಿ ಬಸ್ ದರ ಏರಿಕೆ: ಶೇ.95ರಷ್ಟು ಪ್ರಯಾಣಿಕರ ವಿರೋಧ

ಆರಂಭದಿಂದಲೂ ಬಸ್ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದು, ಈ ಸಂಬಂಧ ಪ್ರಯಾಣಿಕರಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಶೇ.95 ರಷ್ಟು ಸಾರ್ವಜನಿಕರು ಬಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ...
ಬಿಎಂಟಿಸಿ ಬಸ್ ದರ ಏರಿಕೆ: ಶೇ.95ರಷ್ಟು ಪ್ರಯಾಣಿಕರ ವಿರೋಧ
ಬಿಎಂಟಿಸಿ ಬಸ್ ದರ ಏರಿಕೆ: ಶೇ.95ರಷ್ಟು ಪ್ರಯಾಣಿಕರ ವಿರೋಧ
ಬೆಂಗಳೂರು: ಆರಂಭದಿಂದಲೂ ಬಸ್ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದು, ಈ ಸಂಬಂಧ ಪ್ರಯಾಣಿಕರಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಶೇ.95 ರಷ್ಟು ಸಾರ್ವಜನಿಕರು ಬಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 
ರಾಜ್ಯ ಸರ್ಕಾರ 4 ಸಾರಿಗೆ ನಿಗಮಗಳ ಟಿಕೆಟ್ ದರ ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿರುವುದರಿಂದ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯರು ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. 
ಇದರಲ್ಲಿ 569 ಪ್ರಯಾಣಿಕರು ಮತದಾನ ಮಾಡಿದ್ದು, ಈ ಪೈಕಿ 543 ಮಂದಿ ಟಿಕೆಟ್ ದರ ಏರಿಕೆ ವಿರುದ್ಧ ಅಭಿಪ್ರಾಯ ನೀಡಿದ್ದರೆ, 25 ಮಂದಿ ದರ ಏರಿಕೆ ಪರ ಮತ ಚಲಾಯಿಸಿದ್ದಾರೆ. 
ಬಿಎಂಟಿಸಿ ಬಸ್ ಗಳಲ್ಲಿ ಬುಹತೇಕ ಮಂದಿ ಬಡಲವುರ ಹಾಗೂ ಮಧ್ಯಮ ವರ್ಗದವರು ಪ್ರಯಾಣ ಮಾಡುತ್ತಾರೆ. ನಿತ್ಯ 50 ಲಕ್ಷ ಜನರು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಟಿಕೆಟ್ ದರ ಏರಿಕೆ ಮಾಡಿದರೆ, ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಬೀದಿ ವ್ಯಾಪಾರಿಗಳಿಗೆ ಹೆಚ್ಚಿನ ಹೊರೆಯಾಗುತ್ತದೆ. ಅತ್ಯಲ್ಪ ವೇತನಕ್ಕೆ ದುಡಿಯುತ್ತಿರುವ ಅವರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆಂದು ವೇದಿಕೆಯ ಸದಸ್ಯರು ಹೇಳಿದ್ದಾರೆ. 
ಮುಂಬೈ, ಪುಣೆ ಹಾಗೂ ಹೈದರಾಬಾದ್ ನಗರಗಳಿಗೆ ಹೋಲಿಕೆ ಮಾಡಿದರೆ, ದೇಶದ ವಿವಿಧ ನಗರ ಸಾರಿಗೆ ಬಸ್ ಟಿಕೆಟ್ ದರ ಬೆಂಗಳೂರಿನಲ್ಲಿ ದುಬಾರಿಯಾಗಿದೆ. ಇದರಿಂದ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳಿವೆ. ಸರ್ಕಾರ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಕೈಬಿಟ್ಟು ಸಾರಿಗೆ ನಿಗಮಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com