ಸೆ.28ಕ್ಕೆ ಮೇಯರ್ ಚುನಾವಣೆ: ಪಟ್ಟಕ್ಕಾಗಿ ರಾಮಲಿಂಗಾ ರೆಡ್ಡಿ, ಜಾರ್ಜ್ ಬಣಗಳ ಪೈಪೋಟಿ!

ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ. ಸೆ.28ರಂದು ನಡೆಯಲಿದ್ದು, ಚುನಾನಣೆ ಹಿನ್ನಲೆಯಲ್ಲಿ ಮುಂದಿನ ಮೇಯರ್ ಯಾರಾಗುತ್ತಾರೆಂಬ ಚರ್ಚೆ ಈಗಾಗಲೇ ಆರಂಭವಾಗಿದೆ...
ಸೆ.28ಕ್ಕೆ ಮೇಯರ್ ಚುನಾವಣೆ: ಪಟ್ಟಕ್ಕಾಗಿ ರಾಮಲಿಂಗಾ ರೆಡ್ಡಿ, ಜಾರ್ಜ್ ನಡುವೆ ಪೈಪೋಟಿ ಶುರು!
ಸೆ.28ಕ್ಕೆ ಮೇಯರ್ ಚುನಾವಣೆ: ಪಟ್ಟಕ್ಕಾಗಿ ರಾಮಲಿಂಗಾ ರೆಡ್ಡಿ, ಜಾರ್ಜ್ ನಡುವೆ ಪೈಪೋಟಿ ಶುರು!
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ. ಸೆ.28ರಂದು ನಡೆಯಲಿದ್ದು, ಚುನಾನಣೆ ಹಿನ್ನಲೆಯಲ್ಲಿ ಮುಂದಿನ ಮೇಯರ್ ಯಾರಾಗುತ್ತಾರೆಂಬ ಚರ್ಚೆ ಈಗಾಗಲೇ ಆರಂಭವಾಗಿದೆ. 
ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ಈಗಾಗಲೇ ಕಣ್ಣಿಟ್ಟಿರುವ ರಾಮಲಿಂಗಾ ರೆಡ್ಡಿ ಹಾಗೂ ಕೆ.ಜೆ ಜಾರ್ಜ್ ಅವರು, ಇದೀಗ ಮೇಯರ್ ಸ್ಥಾನಕ್ಕೂ ಹಗ್ಗಜಗ್ಗಾಟ ನಡೆಸಲು ಮುಂದಾಗಿದ್ದಾರೆ. 
ಮೇಯರ್ ಸ್ಥಾನವನ್ನು ಈಗಾಗಲೇ ಮಹಿಳಾ ಅಭ್ಯರ್ಥಿಗೆ ಮೀಸಲಿರಿಸಲಾಗಿದ್ದು, ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕ ಮೀಸಲಿಡಲಾಗಿದೆ. 
ಮೇಯರ್ ಚುನಾವಣೆ ಸೆ.28ರಂದು ನಡೆಯಲಿದ್ದು, ಚುನಾವಣೆಗೆ ಕೇವಲ 4 ದಿನಗಳಷ್ಟೇ ಬಾಕಿಯಿದೆ. ಈ ನಡುವೆ ಕಾಂಗ್ರೆಸ್ ಮೇಯರ್ ಸ್ಥಾನಕ್ಕೆ ಲಾಬಿ ನಡೆಸಲು ಆರಂಭಿಸಿದೆ. 
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದು, ಬಿಜೆಪಿ ಅಧಿಕಾರದಿಂದ ದೂರು ಉಳಿದಿದೆ. 
ಲೋಕಸಭಾ ಚುನಾವಣೆ 2019 ಹತ್ತಿರದಲ್ಲಿದ್ದು, ಎಲ್ಲೂ ಮೂರು ಸಂಸದ ಸ್ಥಾನ ಬಿಜೆಪಿಯದ್ದೇ ಆಗಿದೆ. ಹೀಗಾಗಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 
ಕಳೆದ ಬಾರಿ ಅಂದರೆ, 2015ರ ಬಿಬಿಎಂಪಿ ಕೌನ್ಸಿಲ್ ನಲ್ಲಿಯೂ ಇದೇ ತಂತ್ರವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಬಿಜೆಪಿ 101 ಸ್ಥಾನವನ್ನು ಗೆದಿತ್ತು. ಕಾಂಗ್ರೆಸ್ (76) ಹಾಗೂ ಜೆಡಿಎಸ್ (14) ಸ್ಥಾನ, ಸ್ವತಂತ್ರ ಅಭ್ಯರ್ಥಿಗಳು 6 ಸ್ಥಾದಲ್ಲಿ ಗೆಲವು ಸಾಧಿಸಿದ್ದರು. ಅತಂತ್ರ ಸ್ಥಿತಿ ಎದುರಾದ ಹಿನ್ನಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಕೈಜೋಡಿಸಿ ಬಿಬಿಎಂಪಿ ಅಧಿಕಾರವನ್ನು ಪಡೆದುಕೊಂಡಿತ್ತು. 
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್'ನಿಂದ ಜಯನಗರ ಕ್ಷೇತ್ರದ ಗಂಗಾಂಬಿಕೆ ಮಲ್ಲಿಕಾರ್ಜುನ, ಶಾಂತಿನಗರ ಕ್ಷೇತ್ರದಿಂದ ಸೌಮ್ಯ ಶಿವಕುಮಾರ್ ಮತ್ತು ಲಿಂಗಾರಾಜುಪುರ ಕ್ಷೇತ್ರದಿಂದ ಲಾವಣ್ಯ ಗಣೇಶ್ ರೆಡ್ಡಿ ಮೂವರು ಮಹಿಳಾ ಅಭ್ಯರ್ಥಿಗಳಿದ್ದಾರೆ. 
ಗಂಗಾಂಬಿಕೆಯವರಿಗೆ ರಾಮಲಿಂಗಾರೆಡ್ಡಿಯವರ ಬೆಂಬಲವಿದ್ದರೆ, ಸೌಮ್ಯಾ ಅವರಿಗೆ ಎನ್ಎ ಹ್ಯಾರಿಸ್ ಬೆಂಬಲ ಹಾಗೂ ಲಾವಣ್ಯ ಅವರಿಗೆ ಕೆಜೆ ಜಾರ್ಜ್ ಬೆಂಬಲವಿದೆ. ಹೀಗಾಗಿ ಕೆಜೆ. ಜಾರ್ಜ್ ಹಾಗೂ ರಾಮಲಿಂಗಾ ರೆಡ್ಡಿ ನಡುವೆ ತೀವ್ರ ಜಟಾಪಟಿ ನಡೆಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 
ಇಬ್ಬರ ನಡುವಿನ ಜಟಾಪಟಿ ಇದು ಮೊದಲೇನಲ್ಲ. ಈ ಹಿಂದಿನ ಸರ್ಕಾರದಲ್ಲಿ ಜಾರ್ಜ್ ಅವರು, ಎರಡನೇ ಬಾರಿಗೆ ಗೃಹ ಸಚಿವ ಸ್ಥಾನಕ್ಕೆ ಆಗ್ರಹಿಸಿದ್ದರು. ರಾಮಲಿಂಗಾ ರೆಡ್ಡಿ ಕೂಡ ಅದೇ ಸ್ಥಾನಕ್ಕೆ ಆಗ್ರಹಿಸಿದ್ದರು. ಈ ಬಾರಿ ಮೈತ್ರಿ ಸರ್ಕಾರವಿದ್ದು, ಇಬ್ಬರೂ ಬೆಂಗಳೂರು ನಗರಾಭಿವೃದ್ಧಿ ಸ್ಥಾನಕ್ಕೆ ಆಗ್ರಹಿಸಿದ್ದಾರೆ. ಆದರೆ, ಪ್ರಸ್ತುತ ಆ ಖಾತೆ ಪರಮೇಶ್ವರ್ ಅವರ ಕೈಯಲ್ಲಿದೆ. 
ಬಿಜೆಪಿಯಲ್ಲಿದ್ದಾರೆ 62 ಮಹಿಳಾ ಅಭ್ಯರ್ಥಿಗಳು
ಮೇಯರ್ ಸ್ಥಾನಕ್ಕೆ ಜೆಡಿಎಸ್ ಕೂಡ ಪಟ್ಟು ಹಿಡಿದು ಕುಳಿತಿದೆ. ಮೈತ್ರಿ ಸರ್ಕಾರದಲ್ಲಿ ಮೂರು ಬಾರಿಯೂ ಕಾಂಗ್ರೆಸ್ ಅವರಿಗೇ ಮೇಯರ್ ಸ್ಥಾನವನ್ನು ಬಿಟ್ಟುಕೊಡಲಾಗಿತ್ತು. ಆದರೆ, ಈ ಬಾರಿ ಜೆಡಿಎಸ್'ಗೆ ಮೇಯರ್ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಸ್ಥಾನವನ್ನು ಜೆಡಿಎಸ್'ಗೆ ಬಿಟ್ಟುಕೊಡಲಾಗಿದ್ದು, ಮೇಯರ್ ಸ್ಥಾನವನ್ನೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. 
ಈ ನಡುವೆ ಬಿಜೆಪಿ ಕೂಡ ಕಣದಲ್ಲಿ ನಿಂತಿದ್ದು, ಪಕ್ಷದಲ್ಲಿ ಒಟ್ಟು 62 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆಂದು ಹೇಳುತ್ತಿದೆ. 
ಅಭ್ಯರ್ಥಿಗಳ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಈ ಬಗ್ಗೆ ಮುಂದಿನ ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com