ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಹಾವಳಿ

ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು...
ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಎದ್ದುಬಂದ ನೊರೆ
ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಎದ್ದುಬಂದ ನೊರೆ
ಬೆಂಗಳೂರು: ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರ ಮೇಲೆ ಬೀಳುತ್ತಿರುವುದರಿಂತ ಜನರು ಕಿರಿಕಿರಿ ಅನುಭವಿಸುವಂತಾಗಿದೆ. 
ಯಮಲೂರು ಕೋಡಿ ರಸ್ತೆಯಲ್ಲಿ ಕನಿಷ್ಟ 10 ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೊರೆ ಬೆಟ್ಟದಂತೆ ತೋರುತ್ತಿದೆ. ಗಾಳಿಯ ರಭಸಕ್ಕೆ ನೊರೆ ಎಲ್ಲೆಂದರಲ್ಲಿ ಹಾರಾಡಿ ಬೀಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಇನ್ನಿಲ್ಲದ ಸಂಕಟ ಎದುರಾಗಿದೆ. 
ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಯ ಒಳ ಹರಿವು ಹೆಚ್ಚಾಗಿರುವುದೇ ನೊರೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. 
ಬೆಳ್ಳಂದೂರು ಕೋಡಿ, ಯಮಲೂರು ಕೋಡಿ ಮತ್ತು ವರ್ತೂರು ಕೋಡಿಗಳಲ್ಲಿ ಬೆಟ್ಟದಂತೆ ನೊರೆಯ ರಾಶಿ ಉತ್ಪತ್ತಿಯಾಗಿದೆ. ನೊರೆಯ ಪ್ರಮಾಣ ಹೆಚ್ಚಾಗಿರುವುದರಿಂದ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಮೆಷ್ ಅಳವಡಿಸಲಾಗಿದೆ. 
ಗಾಳಿ ಜೋರಾಗಿ ಬೀಸಿದಾಗ ನೊರೆ ರಸ್ತೆ ಹಾಗೂ ವಾಹನ ಸವಾರರ ಮೇಲೆ ಬೀಳುತ್ತಿದೆ. ನೊರೆ ಉಲ್ಬಣದಿಂದ ಸುತ್ತಮುತ್ತಲ ಗ್ರಾಮಸ್ಥರು ತುರಿಕೆ, ಚರ್ಮರೋಗಗಳಿಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ. ನೊರೆಯಲ್ಲಿ ಬೆರೆತಿರುವ ರಾಸಾಯನಿಕ ಅಂಶಗಳು ಚರ್ಮಕ್ಕೆ ತಗುಲಿದರೆ ಉರಿ ಶುರುವಾಗುತ್ತದೆ. ಕಣ್ಣಿಗೆ ಬಿದ್ದರೆ, ದೃಷ್ಟಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com