ಕೊಪ್ಪಳ: ಪ್ರತಿ ಬಾರಿ ಮತ ಚಲಾಯಿಸುವಾಗಲೂ ನನಗೆ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡುತ್ತಾರಾ ಅಂತಾ ಆಶಾ ಭಾವವನ್ನು ಕಟ್ಟಿಕೊಂಡೆ ಮತ ಚಲಾಯಿಸುತ್ತಿದ್ದೇನೆ. ಚುನಾವಣೆಗಳು ಬಂದವು, ಹೋದವು ನನಗಂತು ಸೂರು ಸಿಕ್ಕಿಲ್ಲ. ನನಗೆ ಮನೆ ನೀಡಲು ಭರವಸೆ ಕೊಡುವವರಿಗೆ ನಾನು ಮತ ಚಲಾಯಿಸುತ್ತೇನೆ ಎಂದು ಕೊಪ್ಪಳ ಜಿಲ್ಲೆಯ ವೃದ್ಧ ಮಹಿಳೆಯೊಬ್ಬರು ಹೇಳಿದ್ದಾರೆ.