ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನೆರೆಹೆೊರೆಯವರು ನಿಂದಿಸಿದ ಕಾರಣ 17 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿವೇಕ್ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ರುದ್ರಣ್ಣ ಗಾರ್ಡನ್ ನಿವಾಸಿ ರೇವತಿ ಮೃತ ದುರ್ದೈವಿ.
ಸೋಮವಾರ ಕ್ಷುಲ್ಲಕ ಕಾರಣಕ್ಕಾಗಿ ನೆರೆಹೊರೆಯವರ ಜೊತೆ ಜಗಳವಾಡಿಕೊಂಡಿದ್ದಳು, ಸಂಜೆ ಮನೆಗೆ ಬಂದ ಪಕ್ಕದ ಮನೆಯವರು ಆಕೆಯ ನಡತೆಯ ಬಗ್ಗೆ ಮಾತನಾಡಿದ್ದರು.
ಇದರಿಂದ ಮನನೊಂದ ಯುವತಿ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು, ನಂತರ ಆಕೆಯ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿದ್ದರು, ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು.
ತಕ್ಷಣವೇ ಆಕೆಯ ಪೋಷಕರು ವಿವೇಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರೋಜಾ, ಚೇತು, ಆಕಾಶ್, ದೀಪಾ, ಅಭಿನಯ, ಬೀನಾ ಮತ್ತು ಇಳಂ ವಿರುದ್ಧ ಕೇಸ್ ದಾಖಲಿಸಿದ್ದಾರೆ.
Advertisement