ಉಪಚುನಾವಣೆ: ಗೆಲುವಿನ ಬಳಿಕ ದೇವರ ಪ್ರಾರ್ಥನೆಯಲ್ಲಿ ಬಿಝಿಯಾದ ಶಾಸಕರು

ಉಪಚುನಾವಣೆ ಅಂತ್ಯಗೊಂಡ ಬಳಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಾಸಕರು ಇದೀಗ ದೇವರಿಗೆ ಹರಕೆ, ಪ್ರಾರ್ಥನೆ ಸಲ್ಲಿಸುವುದರತ್ತ ಕಾರ್ಯಮಗ್ನರಾಗಿದ್ದಾರೆ. 
ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ

ಬೆಂಗಳೂರು: ಉಪಚುನಾವಣೆ ಅಂತ್ಯಗೊಂಡ ಬಳಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಾಸಕರು ಇದೀಗ ದೇವರಿಗೆ ಹರಕೆ, ಪ್ರಾರ್ಥನೆ ಸಲ್ಲಿಸುವುದರತ್ತ ಕಾರ್ಯಮಗ್ನರಾಗಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪುಮುಖ್ಯಮಂತ್ರಿಗಳು, ನೂತನ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ಸೋಲು ಕಂಡ ಲಾಖನ್ ಜಾರಕಿಹೊಳಿ ಹಾಗೂ ಉಳಿದ ಅಧಿಕಾರಿಗಳು ಸೇರಿದಂತೆ ಹಲವು ರಾಜಕೀಯ ನಾಯಕರು ನಿನ್ನೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. 

ಉಚುನಾವಣೆ ಫಲಿತಾಂಶ ಬಳಿಕ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರೊಂದಿಗೆ ಮನೆಯಲ್ಲಿಯೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಗಳು ಮನೆಯಲ್ಲಿಯೇ ನರಸಿಂಹ ಹೋಮವನ್ನು ನೆರವೇರಿಸಿದರು. 

ಇನ್ನು ಬಿಜೆಪಿ ಶಾಸಕ ಗೋಪಾಲಯ್ಯ ಅವರು ಮಹಾಲಕ್ಷ್ಮಿ ಲೇಔಟ್ ನಲ್ಲಿ ಮತ ಹಾಕಿದ ಜನರಿಗೆ ಧನ್ಯವಾದಗಳನ್ನು ಹೇಳಲು ಕಾರ್ಯಕ್ರಮವನ್ನು ನಡೆಸಿದರು.

ಗೋಕಾಕ್ ನಲ್ಲಿ ಸತೀಶ್ ಹಾಗೂ ಲಾಖನ್ ಜಾರಕಿಹೊಳಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಸಭೆ ನಡೆಸಿ, ಮಾತುಕತೆ ನಡೆಸಿದರು. 

ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿ ಇದ್ದೇನೆ. ಚುನಾವಣೆಯಲ್ಲಿ ಸೋಲು ಕಂಡಿದ್ದೇನೆಂದು ಅಂದುಕೊಳ್ಳುವುದಿಲ್ಲ. ನೀವು ನನಗೆ ಮತ ನೀಡಿದ್ದೀರಿ. ಯಡಿಯೂರಪ್ಪ ಅವರು ಅವರ ಹೆಸರಿಗೆ ಮತಗಳನ್ನು ಕೇಳಿದರು. ನೀವು ನೀಡಿದ್ದೀರಿ. ಯಡಿಯೂರಪ್ಪಗಾಗಿ ನಾನು ಸೋತೆ. ರಕ್ತ ಸಂಬಂಧಿಗಳಿಗಲ್ಲ ಎಂದು ಲಾಖನ್ ಜಾರಕಿಹೊಳಿ ಹೇಳಿದ್ದಾರೆ. 

ಈ ನಡುವೆ ಹೊಸಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಶರತ್ ಬಚ್ಚೇಗೌಡ ಅವರ ಬೆಂಬಲಿಕರು ಧರ್ಮಸ್ಥಳ ದೇವಾಲಯಕ್ಕೆ ನೀಡುವ ಸಲುವಾಗಿ ಅಕ್ಕಿಯನ್ನು ಸಂಗ್ರಹಿಸಿದ್ದಾರೆ. ಈ ಹಿಂದೆ ಶರತ್ ಅವರು ಗೆಲುವು ಸಾಧಿಸಿದರೆ, ಅಕ್ಕಿ ನೀಡುವುದಾಗಿ ದೇವರ ಬಳಿ ಬೆಂಬಲಿಗರು ಹರಕೆ ಹೊತ್ತುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com