ಮಂಗಳೂರು ಗಲಭೆ, ಗೋಲಿಬಾರ್: ಸಿಐಡಿ ತನಿಖೆ ಆರಂಭ

ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಲೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದ್ದು, ಶುಕ್ರವಾರ ತನಿಖೆ ಆರಂಭಿಸಿದೆ. 
ಮಂಗಳೂರು ಗೋಲಿಬಾರ್
ಮಂಗಳೂರು ಗೋಲಿಬಾರ್
Updated on

ಮಂಗಳೂರು: ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಲೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದ್ದು, ಶುಕ್ರವಾರ ತನಿಖೆ ಆರಂಭಿಸಿದೆ. 

ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದಲ್ಲಿ 5 ಮಂದಿ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡಿದೆ. ಸಿಐಡಿ ಸಂತಡಕ್ಕೆ ತನಿಖೆ ನಡೆಸಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. 

ಶುಕ್ರವಾರ ಬೆಳಗ್ಗೆ ಕಮಿಷನರ್ ಕಚೇರಿಗೆ ಆಗಮಿಸಿದ ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದ ತನಿಖಾ ತಂಡ, ಗೋಲಿಬಾರ್ ಘಟನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ಇಡೀ ಘಟನೆಯ ಬಗ್ಗೆ ಅವಶ್ಯವಿರುವ ಕಡತಗಳ ಪರಿಶೀಲನೆ ನಡೆಸಿತು. 

ಪ್ರಮುಖ ದಾಖಲೆಗಳು ಹಾಗೂ ದಾಖಲಾದ ಪ್ರಕರಣಗಳ ವಿವರಗಳನ್ನು ಪಡೆದುಕೊಂಡಿತು ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸರಿಂದ ಗಲಭೆ ತನಿಖೆ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com