ಸಿಲಿಕಾನ್ ಸಿಟಿ ಇನ್ಮುಂದೆ ಕ್ಲೀನ್ ಸಿಟಿ! ಸ್ವಚ್ಚ ಸರ್ವೇಕ್ಷಣ ಶ್ರೇಯಾಂಕ ಸುಧಾರಣೆಗೆ ಮುಂದಾದ ಬಿಬಿಎಂಪಿ

ಸ್ವಚ್ಚ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಬೆಂಗಳೂರಿನ ರೇಟಿಂಗ್ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಮುಖ್ಯ ಕಾರ್ಯದರ್ಶಿ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಕಠಿಣ ನಿರ್ದೇಶನಗಳನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಈ ಬಗ್ಗೆ ನಿರ್ದೇಶನಗಳನ್ನು
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸ್ವಚ್ಚ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಬೆಂಗಳೂರಿನ ರೇಟಿಂಗ್ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಮುಖ್ಯ ಕಾರ್ಯದರ್ಶಿ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಕಠಿಣ ನಿರ್ದೇಶನಗಳನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಿದ್ದಾರೆ.ನಗರವನ್ನು ಸ್ವಚ್ಚಗೊಳಿಸಲು ತಮ್ಮೊಂದಿಗೆ  ಕೈಜೋಡಿಸುವಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.

ಕಸ ನಿರ್ವಹಣೆಯಲ್ಲಿ ನಗರವು 194 ನೇ ಸ್ಥಾನದಲ್ಲಿದೆ, ಮೈಸೂರು 3 ನೇ ಸ್ಥಾನದಲ್ಲಿದೆ. ಮಾರ್ಚ್ ನಲ್ಲಿನ ದಾಕಲೆಗಳಂತೆ ಮೈಸೂರು ಬಯಲು ಬಹಿರ್ದೆಶೆ ಮುಕ್ತ ನಗರ ಎಂದು  ಘೋಷಿಸಲ್ಪಟ್ಟರೆ, ಬೆಂಗಳೂರು ಡಿಸೆಂಬರ್‌ನಲ್ಲಿ ಈ ಗೌರವಕ್ಕೆ ಪಾತ್ರವಾಗಿದೆ.ಗರದ ಕಸದ ಸಮಸ್ಯೆಯನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

“ಯಾವುದೇ ಸಮಯದಲ್ಲಿ, ಪ್ರತಿ ಬೀದಿಯಲ್ಲಿ, ಕನಿಷ್ಠ ಒಂದು.ಕಸದ ರಾಶಿಯನ್ನಾದರೂ ಕಾಣಬಹುದು. ಇದು ಎಲ್ಲಾ ಮುನ್ನೆಚ್ಚರಿಕೆ, ಸ್ವಚ್ಚತೆ ಕಾರ್ಯದ ಹೊರತಾಗಿಯೂ ಇದ್ದೇ ಇರಲಿದೆ. ಆದರೆ, ಮುಖ್ಯ ಕಾರ್ಯದರ್ಶಿ ಕಠಿಣ ನಿರ್ದೇಶನಗಳನ್ನು ನೀಡಿದ್ದಾರೆ. ಎಲ್ಲ ಪಾಲುದಾರರು ಮತ್ತು ಸರ್ಕಾರಿ ಇಲಾಖೆಗಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಈಗ, ಬೆಂಗಳೂರು ಸ್ವಚ್ಚ ಹಾಗೂ ಹಸಿರು ನಗರ(ಕ್ಲೀನ್ ಆಂಡ್ ಗ್ರೀನ್ ಸಿಟಿ) ಆಗಬೇಕಿದೆ. ಆದರೆ ಅದಕ್ಕಾಗಿ ನಗರದಲ್ಲಿನ ಕಸದ ಸಮಸ್ಯೆಯನ್ನು ತೆರವು ಮಾಡಬೇಕಿದೆ ಎನ್ನುವುದು ಮುಖ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು.ಸ್ವಚ್ಚತೆಯ ಬ್ರ್ಯಾಂಡ್ ಅಂಬಾಸಿಡರ್ ಬಿಬಿಎಂಪಿ ಜತೆ ಪಾಲುದಾರರಾಗಿರಬೇಕು ”ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಬಯಲು ಬಹಿರ್ದೆಶೆ ಇಲ್ಲ ಎನ್ನುವುದು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಿಬಿಎಂಪಿ ಪರೀಕ್ಷೆಗೆ ಒಳಪಡಿಸಲಿದೆ.

ಬಿಬಿಎಂಪಿ ಆಯುಕ್ತ ಬಿ.ಎಚ್. ​​ಅನಿಲ್ ಕುಮಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ನಗರವನ್ನು ಕಸ ಮುಕ್ತವಾಗಿಸಲು ತಮ್ಮ ಸಂಸ್ಥೆ ಕಾರ್ಯಸೂಚಿಯನ್ನು ರೂಪಿಸಿದೆ ಎಂದು ಘೋಷಿಸಿದರು. ಮತ್ತು ಬಯಲು ಬಹಿರ್ದೆಶೆ ಮುಕ್ತ ವಾದ ನಂತರ ಅದರ ಸ್ವಚ್ಚ ಸರ್ವೇಕ್ಷಣ್ಶ್ರೇಯಾಂಕವನ್ನು ಸುಧಾರಿಸಿದೆ ಎನ್ನುವುದು ಹೇಳಿದ್ದಾರೆ.

ಘನ ತ್ಯಾಜ್ಯ ನಿರ್ವಹಣೆಯ ಬಿಬಿಎಂಪಿ ವಿಶೇಷ ಆಯುಕ್ತ ಡಿ ರಣದೀಪ್ ಮಾತನಾಡಿ, ನಾಗರಿಕ ಸಂಸ್ಥೆ ಈಗ ನಗರವನ್ನು ಸ್ವಚ್ಚಗೊಳಿಸುವತ್ತ ಗಮನ ಹರಿಸಿದೆ ಮತ್ತು ಚರಂಡಿಗಳು ಕಸ ಮುಕ್ತವಾಗಿರುವುದನ್ನು ಖಾತ್ರಿಪಡಿಸಿದೆ."ಬೀದಿ ನಾಟಕದ ಮೂಲಕ ಜಾಗೃತಿ ಸೇರಿದಂತೆ ಇದಕ್ಕಾಗಿ ವಿವಿಧ ರೀತಿಯ ಅಭಿಯಾನವನ್ನು ಅಳವಡಿಸಿಕೊಳ್ಳಲು ಮತ್ತು ವಾರ್ಡ್ ವಾರು  ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಒತ್ತು ನೀಡಲಾಗುತ್ತದೆ, ಇದು ಸ್ವಚ್ಚ ಸರ್ವೇಕ್ಷಣ ಶ್ರೇಯಾಂಕದಲ್ಲಿ ಂಆತ್ರವಲ್ಲದೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನಗಳು ಮತ್ತು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರವೂ ಮುಖ್ಯವಾಗಿದೆ, ” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com