ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು: ಅಸಭ್ಯ ವರ್ತನೆ ವಿರುದ್ಧ ಕಠಿಣ ಕ್ರಮ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ವರ್ಷಾಚರಣೆ ನೆಪದಲ್ಲಿ ಬಲವಂತವಾಗಿ ಶುಭ ಕೋರಿ ಅನುಚಿತವಾಗಿ ವರ್ತಿಸುವುದು, ಬಲವಂತವಾಗಿ ಕೈ ಕುಲುಕುವುದು, ಮೈ ಮೇಲೆ ಬೀಳುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ವರ್ಷಾಚರಣೆ ನೆಪದಲ್ಲಿ ಬಲವಂತವಾಗಿ ಶುಭ ಕೋರಿ ಅನುಚಿತವಾಗಿ ವರ್ತಿಸುವುದು, ಬಲವಂತವಾಗಿ ಕೈ ಕುಲುಕುವುದು, ಮೈ ಮೇಲೆ ಬೀಳುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಹೊಸವರ್ಷಾಚರಣೆ ವೇಳೆ ಅಸಭ್ಯವಾಗಿ ವರ್ತಿಸುವವರನ್ನು ಮುಲಾಜಿಲ್ಲದೆ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ. 

ನಗರದಲ್ಲಿರುವ ಪಬ್ ಹಾಗೂ ಬಾರ್ ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿಯೇ ನಡೆಯಲಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನ ಪತ್ರಿಕೆಗಳು ಹರಿದಾಡುತ್ತಿವೆ. ಕಳೆದ ವರ್ಷ ಅರಣ್ಯ ಪ್ರದೇಶಗಳಲ್ಲಿ ರೇವ್ ಪಾರ್ಟಿಗಳು ನಡೆದಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳ ಮೇಲೂ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಗಾವಲಿರಿಸಿದ್ದಾರೆ. 

ಶಿವಗಂಗೆ ಅರಣ್ಯ ಪ್ರದೇಶ, ತುಮಕೂರಿನ ಸಿದ್ದರಬೆಟ್ಟ, ಮಾಗಡಿಯ ಉತ್ತರದುರ್ಗಾ, ಕೋಲಾರ ಅಂತರ್ಗಂಗೆ, ಸಾತನೂರಿನ ಕಬ್ಬಾಳಿದುರ್ಗಾ, ಮಂಡ್ಯಾದ ಕುಂಟಿಬೆಟ್ಟ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಿಳಿಕಾಲರಂಗ ಸ್ವಾಮಿ ಬೆಟ್ಟ, ರಾಮನಗರದ ಎಸ್ಆರ್ಎಸ್ ಬೆಟ್ಟ, ಚಿಕ್ಕಬಳ್ಳಾಪುರ ಗುಡಿಬಂಡೆ, ಆಗುಂಬೆ ಹಾಗೂ ಕುದುರ ಮುಖದ ಅರಣ್ಯ ಪ್ರದೇಶಗಳಲ್ಲಿ ರೇವ್ ಪಾರ್ಟಿಗಲು ನಡೆಯುತ್ತಿರುತ್ತದೆ. ಹೀಗಾಗ ಈ ಪ್ರದೇಶಗಳ ಮೇಲೆ ಅಧಿಕಾರಿಗಳು ಹೆಚ್ಚಿನ ಕಣ್ಗಾವಲಿರಿಸಿದ್ದಾರೆಂದು ವರದಿಗಳು ತಿಳಿಸಿವೆ. 

ರೂ.2,000-5,000ವರೆಗೂ ಈಗಾಗಲೇ ಪಾರ್ಟಿಗಳ ಟಿಕೆಟ್ ಗಳು ಮಾರಾಟವಾಗುತ್ತಿದ್ದು, ಊಟ, ಮ್ಯೂಸಿಕ್ ಮತ್ತು ಡ್ಯಾನ್ಸ್, ಗುಂಡು ಎಲ್ಲಾ ವ್ಯವಸ್ಥೆಗಳನ್ನು ಪಾರ್ಟಿಯಲ್ಲಿ ಆಯೋಜನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. 

ಇನ್ನು ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ನಿರ್ಧರಿಸಿದ್ದು, ಈಗಾಗಲೇ ಎಚ್ಚರಿಕೆಗಳನ್ನು ರವಾನಿಸಿದೆ. 

ಡಿಸೆಂಬರ್ 25ರಿಂದಲೇ ಬೆಂಗಳೂರು ಹೊರಾಂಗಣ ಪ್ರದೇಶಗಳ ಮೇಲೆ ಅರಣ್ಯ ಇಲಾಖೆ ಕಣ್ಗಾವಲಿರಿಸಿದೆ. ಪ್ರಮುಖವಾಗಿ ಗಡಿ ಪ್ರದೇಶಗಳ ಮೇಲೆ. ರಾತ್ರಿ ಪಾಳಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com