ಇಂತ ಪೊಳ್ಳು ಬೆದರಿಕೆಗೆ ನನ್ನ ಮಗ ಹೆದರುವುದಿಲ್ಲ: ಶಾಸಕ ಪ್ರೀತಂಗೌಡ ತಾಯಿ

ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ ತಾಯಿ ನಾಗರತ್ನ...
ಜೆಡಿಎಸ್ ಕಾರ್ಯಕರ್ತರು-ಪ್ರೀತಂ ಗೌಡ
ಜೆಡಿಎಸ್ ಕಾರ್ಯಕರ್ತರು-ಪ್ರೀತಂ ಗೌಡ
Updated on: 
ಹಾಸನ: ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ ತಾಯಿ ನಾಗರತ್ನ ಅವರು ಇಂತ ಪೊಳ್ಳು ಬೆದರಿಕೆಗೆ ನನ್ನ ಮಗ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಹಾಸನ ಜೆಡಿಎಸ್ ಭದ್ರಕೋಟೆಯಾಗಿತ್ತು ಅಂತಹ ಕೋಟೆಯನ್ನೇ ಭೇದಿಸಿರುವ ಧೀರ, ವೀರ ನನ್ನ ಮಗ ಅಂತಹವನು ಇಂತಹ ಪೊಳ್ಳು ಬೆದರಿಕೆಗೆ ಹೆದರುತ್ತಾನಾ ಎಂದು ಹೇಳಿದ್ದಾರೆ.
ಇದೇ ವೇಳೆ, ಮನೆಯಲ್ಲಿ ಯಾರು ಇಲ್ಲದಾಗ ಈ ರೀತಿ ದಾಳಿ ಮಾಡಿರುವುದು ತಪ್ಪು. ಇಂತಹ ಕೃತ್ಯವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಿದ್ದರು ಅದು ತಪ್ಪೇ. ಜೆಡಿಎಸ್ ಕಾರ್ಯಕರ್ತರ ಈ ಕೃತ್ಯದಿಂದ ತುಂಬಾ ಆಘಾತವಾಗಿದೆ.
ಗೂಂಡಾಗಿರಿ, ಮಾನಸಿಕ ಕಿರಕುಳು ನೀಡುವುದು ತಪ್ಪು. ನನ್ನ ಮಗ ತಪ್ಪು ಮಾಡಿಲ್ಲ ಆತ ತಪ್ಪು ದಾರಿಯಲ್ಲಿ ಹೋಗಲ್ಲ ಎಂದು ನಾಗರತ್ನ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com