ಏರೋ ಇಂಡಿಯಾ ವಿಮಾನ ದುರಂತಕ್ಕೆ ಟ್ವಿಸ್ಟ್; ವಿಮಾನದಲ್ಲಿದ್ದದ್ದು 4 ಪೈಲಟ್ ಗಳು?, ಮತ್ತೋರ್ವ ಗಾಯಾಳು ಪೈಲಟ್ ಪತ್ತೆ

ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನಗಳ ಅಪಘಾತ
ವಿಮಾನಗಳ ಅಪಘಾತ
ಬೆಂಗಳೂರು: ಬೆಂಗಳೂರು ಏರೋ ಇಂಡಿಯಾ 2019ಗಾಗಿ ತಾಲೀಮು ನಡೆಸುತ್ತಿದ್ದ ವೇಳೆ ಉಂಟಾಗಿದ್ದ ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ವಾಯುನೆಲೆಯಲ್ಲಿ ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್​ ಲಘು ವಿಮಾನ ಡಿಕ್ಕಿಯಲ್ಲಿ ಕಣ್ಮರೆಯಾಗಿದ್ದ ಮತ್ತೊಬ್ಬ ಪೈಲಟ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಾಲೀಮಿನಲ್ಲಿ ತೊಡಗಿದ್ದ ಎರಡು ಸೂರ್ಯ ಕಿರಣ ಲಘುವಿಮಾನ ಡಿಕ್ಕಿ ಹೊಡೆ ಪರಿಣಾಮ ಓರ್ವ ಪೈಲಟ್​ ಸಾವನ್ನಪ್ಪಿದ್ದರು. ಇನ್ನು ಎರಡು ವಿಮಾನದಲ್ಲಿದ್ದ ಇನ್ನುಳಿದ ಇಬ್ಬರು ಪೈಲಟ್​ ಕೆಳಗೆ ಹಾರಿದ್ದರು. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಎರಡು ವಿಮಾನಗಳಲ್ಲಿ ಒಟ್ಟು ನಾಲ್ವರು ಪೈಲಟ್​ ಗಳು ಇದ್ದರು ಎನ್ನಲಾಗಿದೆ. ಈ ಪೈಕಿ ಇಬ್ಬರು ಪೈಲಟ್​ ಗಳು ಸಿಕ್ಕಿದ್ದು, ಇಂದು ಮುಂಜಾನೆ ವಿಮಾನದಿಂದ ಜಂಪ್​ ಮಾಡಿದ್ದ 2 IC ವಿಂಗ್ ಕಮಾಂಡರ್ ವಿಜಯ್​ ಶೆಲ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 
ಆದರೆ ಈ ಬಗ್ಗೆ ವಾಯು ಸೇನೆ ಹಾಗೂ ಏರೋ ಇಂಡಿಯಾ ಆಯೋಜಕರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಏರ್ಫೋಸ್​ ಹಿಂಭಾಗದ ಗಂಟಿಗಾನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಪತ್ತೆಯಾದ ಸಂದರ್ಭದಲ್ಲಿ ಶೆಲ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕಮಾಂಡರ್ ವಿಜಯ್​ ಶೆಲ್ಕೆ ಜೊತೆಗೆ ಸ್ಕ್ವಾಡ್ರನ್​ ಲೀಡರ್ ತೇಜೇಶ್ವರ್ ಸಿಂಗ್​​ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಎಫ್​ಎಸ್​ಎಲ್​​ ಟೀಂನಿಂದ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಬ್ಲ್ಯಾಕ್​ ಬಾಕ್ಸ್​ನಲ್ಲಿ ಪೈಲಟ್-ಎಟಿಸಿ ಸಂಭಾಷಣೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com