ಭಾರತ್ ಬಂದ್: ಬಿಎಂಟಿಸಿಗೆ 3 ಕೋಟಿ, ಕೆಎಸ್ ಆರ್ ಟಿಸಿಗೆ 5.6 ಕೋಟಿ ರೂ ನಷ್ಟ

2 ದಿನಗಳ ಕಾಲ ನಡೆದ ಭಾರತ್ ಬಂದ್ ನಿಂದಾಗಿ ಕೇವಲ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ ರಾಜ್ಯ ಸರ್ಕಾರದ 2 ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಸಂಸ್ಥೆಗಳಿಗೆ ಕೋಟಿ ಕೋಟಿ ನಷ್ಟ ಉಂಟು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 2 ದಿನಗಳ ಕಾಲ ನಡೆದ ಭಾರತ್ ಬಂದ್ ನಿಂದಾಗಿ ಕೇವಲ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ ರಾಜ್ಯ ಸರ್ಕಾರದ 2 ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಸಂಸ್ಥೆಗಳಿಗೆ ಕೋಟಿ ಕೋಟಿ ನಷ್ಟ ಉಂಟು ಮಾಡಿದೆ.
ಬಂದ್ ನಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗಿತ್ತು. ಹಲವು ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರಿಂದ ಹತ್ತಾರು ಬಸ್ ಗಳು ಜಖಂಗೊಂಡಿದ್ದವು. ರಾಜ್ಯದ್ಯಂತ ಸುಮಾರು 58ಕ್ಕೂ ಅಧಿಕ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಬಸ್ ಗಳ ಗಾಜುಗಳ ಪುಡಿ ಪುಡಿಯಾಗಿ ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟವಾಗಿದೆ.
ಸಾರಿಗೆ ಇಲಾಖೆಯ ಮೂಲಗಳು ತಿಳಿಸಿರುವಂತೆ 2 ದಿನಗಳ ಬಂದ್ ನಿಂದಾಗಿ ಕೆಎಸ್ ಆರ್ ಟಿಸಿಗೆ ಸುಮಾರು 5.6 ಕೋಟಿ ರೂ ನಷ್ಟವಾಗಿದ್ದು, ಬಿಎಂಟಿಸಿಗೆ 3 ಕೋಟಿ ರೂ ನಷ್ಟವಾಗಿದೆ. ಮಂಗಳವಾರ ಸಂಜೆ ವೇಳೆ ಸಾರಿಗೆ ಇಲಾಖೆಯ ಶೇ.43.3ರಷ್ಟು ಬಸ್ ಗಳು ಮಾತ್ರ ಸೇವೆಯಲ್ಲಿ ನಿರತವಾಗಿದ್ದವು. 5,658 ಮಾರ್ಗಗಳಲ್ಲಿ ಬಸ್ ಸೇವೆ ಸ್ಥಗಿತವಾಗಿತ್ತು. ಕೇವಲ 2,450 ಮಾರ್ಗಗಳಲ್ಲಿ ಮಾತ್ರ ಬಸ್ ಸೇವೆ ಮುಂದುವರೆದಿತ್ತು. ಇನ್ನು ಬೆಂಗಳೂರಿನಲ್ಲಿ ಶೇ.36.6ರಷ್ಟು ಬಸ್ ಗಳು ಮಾತ್ರ ರಸ್ತೆಗಳಿದು, 6,037 ಮಾರ್ಗಗಳ ಪೈಕಿ ಕೇವಲ 2,211 ಮಾರ್ಗಗಳಲ್ಲಿ ಮಾತ್ರ ಸೇವೆ ನೀಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಇದರಿಂದ ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com