ಚಿತ್ರದುರ್ಗ: ಗಂಡ-ಹೆಂಡತಿ ಜಗಳಕ್ಕೆ 2 ವರ್ಷದ ಮಗು ಬಲಿ! ಪತಿಯೇ ಕೊಲೆಗಾರ ಎಂದ ಪತ್ನಿ

ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವುದು ಹಳೆ ಗಾದೆ. ಆದರೆ ಚಿತ್ರದುರ್ಗದಲ್ಲಿ ಈ ಗಾದೆ ಮಾತು ಸತ್ಯವಾಗಿದೆ. ಗಂಡ-ಹೆಂಡತಿ ಜಗಳದ ನಡುವೆ ಕೋಪಗೊಂಡ ....
ಚಿತ್ರದುರ್ಗ: ಗಂಡ-ಹೆಂಡತಿ ಜಗಳಕ್ಕೆ 2 ವರ್ಷದ ಮಗು ಬಲಿ! ಪತಿಯೇ ಕೊಲೆಗಾರ ಎಂದ ಪತ್ನಿ
ಚಿತ್ರದುರ್ಗ: ಗಂಡ-ಹೆಂಡತಿ ಜಗಳಕ್ಕೆ 2 ವರ್ಷದ ಮಗು ಬಲಿ! ಪತಿಯೇ ಕೊಲೆಗಾರ ಎಂದ ಪತ್ನಿ
Updated on: 
ಚಿತ್ರದುರ್ಗ: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವುದು ಹಳೆ ಗಾದೆ. ಆದರೆ ಚಿತ್ರದುರ್ಗದಲ್ಲಿ ಈ ಗಾದೆ ಮಾತು ಸತ್ಯವಾಗಿದೆ. ಗಂಡ-ಹೆಂಡತಿ ಜಗಳದ ನಡುವೆ ಕೋಪಗೊಂಡ ಪತಿ ಎರಡು ವರ್ಷದ ಮಗುವನ್ನು ಗೋಡೆಯತ್ತ ಎಸೆದ ಪರಿಣಾಮ ಮಗು ದಾರುಣ ಸಾವನ್ನಪ್ಪಿರುವ ಘಟನೆ ಹಿರಿಯೂರು ಸಾಹಿರಿಯೂರು ಪಟ್ಟಣದ ಆಜಾದ್ ಬಡಾವಣೆಯಲ್ಲಿ ನಡೆದಿದೆ.
ಮೊಹ್ಮದ್ ರಿಹಾನ್(2)  ಎಂಬ ಮಗು ಸಾವಿಗೀಡಾದ ದುರ್ದೈವಿ. ಮಮಗು. ಮಗುವಿನ ತಂದೆ ಜಾಫರ್  ಕೋಪದ ಭರದಲ್ಲಿ ಮಗುವನ್ನು ಗೋಡೆಯತ್ತ ಬಲವಾಗಿ ಎಸೆದದ್ದೇ ಈ ದುರ್ಘಟನೆಗೆ ಕಾರಣ ಎಂದು ಮಗುವಿನ ತಾಯಿ  ತಬ್ಸುಮ್ ಬಾನು.  ಪೋಲೀಸರಿಗೆ ದೂರಿತ್ತಿದ್ದಾಳೆ.
ಜಾಫರ್  ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದ. ಮೊನ್ನೆ ಶುಕ್ರವಾರ ಸಹ ಇದೇ ಘಟನೆ ಮರುಕಳಿಸಿದ್ದು ಈ ವೇಳೆ ಜಗಳದ ನಡುವೆ ಕೋಪಗೊಂಡ ಆತ ಮಗುವನ್ನು ಎತ್ತಿ ಬಲವಾಗಿ ಗೋಡೆಯತ್ತ ಎಸೆದಿದ್ದಾನೆ. ಮಗು ಅಸ್ವಸ್ಥಗೊಂಡ ಪರಿಣಾಮ ತಕ್ಷಣ ಮಗು ರಿಹಾನ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲ ನೀಡದೆ ಭಾನುವಾರ ರಾತ್ರಿ ಮಗು ಸಾವನ್ನಪ್ಪಿದೆ.
ಮಗುವಿನ ಸಾವಿನಿಂದ ನೊಂದು, ಕೋಪಗೊಂಡ ಮಗುವಿನ ತಾಯಿ ತಬ್ಸುಮ್ ಬಾನು ಪತಿ ವಿರುದ್ಧ ಹಿರಿಯೂರು ಪೋಲೀಸರಿಗೆ ದೂರು ಸಲ್ಲಿಸಿದ್ದಾಳೆ. ಪೋಲೀಸರು ಆರೋಪಿ ಜಾಫರ್ ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com