ಬಿಬಿಎಂಪಿ ಅನುಪಯುಕ್ತ ಸರ್ಕಾರಿ ಜಾಗ, ಕಟ್ಟಡಗಳು, ಆಸ್ಪತ್ರೆಗಳಲ್ಲಿ ವಸತಿ ಹೀನರಿಗೆ ಆಶ್ರಯ

ರಾಜಧಾನಿ ಬೆಂಗಳೂರಿನಲ್ಲಿ ಹನ್ನೆರಡು ಅಸುರಕ್ಷಿತ ಕಟ್ಟಡಗಳು, ಮೂರು ಖಾಲಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ನಿರಾಶ್ರಿತರ ತಾಣಗಳಾಗಿ ಮಾರ್ಪಾಟು ಮಾಡಲಾಗುತ್ತಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು
Updated on
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನ್ನೆರಡು ಅಸುರಕ್ಷಿತ ಕಟ್ಟಡಗಳು, ಮೂರು ಖಾಲಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳು ನಿರಾಶ್ರಿತರ ತಾಣಗಳಾಗಿ ಮಾರ್ಪಾಡಾಗಲಿವೆ. 
ಜನವರಿ ಅಂತ್ಯದ ವೇಳೆಗೆ 15 ಕಟ್ಟಡಗಳಲ್ಲಿ ಕನಿಷ್ಟ 10 ಕಟ್ಟಡಗಳನ್ನು ಮನೆ ಇಲ್ಲದವರ ಆಶ್ರಯ ತಾಣಗಳಾಗಿ ಪರಿವರ್ತಿಸಲು ಬಿಬಿಎಂಪಿ ಗುರಿ ಹೊಂದಿದೆ.
ಆನೇಪಾಳ್ಯ, ಶಾಂತಿನಗರದಲ್ಲಿ ಈಗಾಗಲೇ  ಆಶ್ರಯ ಕಲ್ಪಿಸಿರುವ  ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಳ್ಳಲಿದೆ.
ಹೆಣ್ಣೂರಿನ ಹೊಲಿ ಕ್ರಾಸ್ ಮಾರ್ಸಿ ಆಶ್ರಯದಲ್ಲಿ 16 ಮಹಿಳೆಯರಿಗೆ, ಕಲಾಸಿಪಾಳ್ಯದ ಮಾರಿಯಮ್ಮ ದೇವಾಲಯದಲ್ಲಿ ಒಂದು ರಾತ್ರಿಗೆ 20 ರೂ. ವೆಚ್ಚದಲ್ಲಿ 100 ರಿಂದ 150 ಜನರಿಗೆ ಈಗಾಗಲೇ ಆಶ್ರಯ ಒದಗಿಸಲಾಗಿದ್ದು, ಅವರಿಗೆ ಸೂಕ್ತ ಬೇಡ್ ವ್ಯವಸ್ಥೆ ಕೂಡಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ 31ರೊಳಗೆ ಇಂತಹ 30 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್  ತಿಳಿಸಿದ್ದಾರೆ.
ಮೆಜೆಸ್ಟಿಕ್, ಮಾರ್ಕೆಟ್  ಸೇರಿದಂತೆ ಮನೆ ಇಲ್ಲದವರು ಹೆಚ್ಚಾಗಿರುವ ಸ್ಥಳಗಳಲ್ಲಿ ಇಂತಹ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಲಹಂಕದ ಜಕ್ಕೂರು ವಾರ್ಡಿನಲ್ಲಿ ಆಶ್ರಯ ಕೇಂದ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ವಿನ್ಸ್ ರಸ್ತೆ, ಸುಮ್ಮನಹಳ್ಳಿ. ಹೂಡಿ, ಮತ್ತಿತರ ಕಡೆಗಳಲ್ಲಿ ಮನೆ ಇಲ್ಲದವರಿಗೆ ಆಶ್ರಯ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com