ಇತ್ತೀಚೆಗೆ ಮುಕ್ತಾಯವಾದ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿಯು ಈ ಅಂಶವನ್ನು ಬಹಿರಂಗಪಡಿಸಿದೆ.ಇದರ ಆಧಾರದಲ್ಲಿ ಮಧ್ಯಪ್ರದೇಶದಲ್ಲಿ 18,307 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ.ರಾಜಸ್ಥಾನದಲ್ಲಿ 12,052, ಉತ್ತರ ಪ್ರದೇಶದ 8,092, ಜಾರ್ಖಂಡ್ ನಲ್ಲಿ 7,564, ಆಂಧ್ರಪ್ರದೇಶದಲ್ಲಿ 7,483 ಹಾಗೂ ಕರ್ನಾಟಕದಲ್ಲಿ 4,767 ಏಕೋಪಾದ್ಯಾಯ ಶಾಲೆಗಳಿವೆ. ಭಾರತದಾದ್ಯಂತ ಇಂತಹಾ 92,275 ಶಾಲೆಗಳಿವೆ.