ಮಾಜಿ ಎಂಎಲ್ಸಿ ಶಶೀಲ್ ನಮೋಶಿ, ಈಶ್ವರಪ್ಪ, ಮಾಜಿ ಬಿಜೆಪಿ ಅಭ್ಯರ್ಥಿ ಪಿ.ಗದಿಲಿಂಗಪ್ಪ, ಮಾಜಿ ಶಾಸಕ ಬಿ. ಶಿವರಾಮ ರೆಡ್ಡಿ, ಎಸ್. ಇಂಧುಶೇಕರ್ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೂವರು ಪುರೋಹಿತರಾದ ಉಮಾಮಹೇಶ್ವರಿ, ರಾಮಂಜನೇಯ ಮತ್ತು ಸೀತಾರಾಮ ಅವರುಗಳು ದೋಷಮುಕ್ತರಾಗಿದ್ದಾರೆ. ಸ್ಥಳೀಯ ಪೋಲೀಸರ ಅನುಮತಿ ಪಡೆಯದೆ ರಾಜಕೀಯ ಚಟುವಟಿಕೆಗಾಗಿ ದೇವಸ್ಥಾನದ ಆವರಣವನ್ನು ಬಳಸಲು ಅವಕಾಶ ಕಲ್ಪಿಸಿದ್ದ್ದಕ್ಕಾಗಿ ಈ ಅರ್ಚಕರ ಮೇಲೆ ದೂರು ದಾಖಲಾಗಿತ್ತು.