ಬೆಂಗಳೂರು: ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ಕೈಬಿಡಬೇಕು, ಪಶ್ಚಿಮಘಟ್ಟ ಅರಣ್ಯ ಸಂಪತ್ತಿಗೆ ಹಾನಿಯಾಗುವ ಮರಳು, ಟಿಂಬರ್ ಮಾಫಿಯಾಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಬೇಕು, ಅರಣ್ಯ ಒತ್ತುವರಿ ತಡೆದು, ದೇವಿವನಗಳನ್ನು ಸಂರಕ್ಷಿಸಿ, ಜೇನು ನೋಣವನ್ನು ರಾಜ್ಯಕೀಟವೆಂದು ಘೋಷಿಸಬೇಕು, ಘಟ್ಟ ಪ್ರದೇಶದ ನದಿ ಮತ್ತು ಜಲ ಮೂಲಗಳ ಸಂರಕ್ಷಣೆಗೆ ಪ್ರಧಾನ ಆದ್ಯತೆ ನೀಡಬೇಕೆಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.