ಮಂಗಳೂರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಯುವಕರು ಸಮುದ್ರಪಾಲು

ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ.
ಮಂಗಳುರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಯುವಕರು ಸಮುದ್ರಪಾಲು
ಮಂಗಳುರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಯುವಕರು ಸಮುದ್ರಪಾಲು
ಮಂಗಳೂರು: ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ.
ಕಾವೂರಿನ ಗುರುಪ್ರಸಾದ್ (28) ಹಾಗೂ ಬಜ್ಪೆ ಗ್ರಾಮದ ನಿವಾಸಿ ಸುಜಿತ್ (32) ಮೃತ ದುರ್ದೈವಿಗಳು ಇವರೊಡನೆ ಈಜಲು ತೆರಳಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತ ಸುಚಿತ್‌ ಮಂಗಳೂರಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರೆ, ಗುರುಪ್ರಸಾದ್‌ ಕಾವೂರಿನಲ್ಲಿ ಕೆಲಸದಲ್ಲಿದ್ದನು. 
ಬಜ್ಪೆ ಮೂಲದ ಸೃಜನ್ ಹಾಗೂ ಕಾಂರ್ತಿಕ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು ಇದರಲ್ಲಿ ಸೃಜನ್ ತೀವ್ರ ಅಸ್ವಸ್ಥರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಹಿತ್ಲುವಿನ ಅಗ್ಗದ ಕಳಿಯ ಎಂಬಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡೋತ್ಸವ  ಇದ್ದ ಕಾರಣ ಅದರಲ್ಲಿ ಭಗವಹಿಸಲು ಈ ಯುವಕರು ಆಗಮಿಸಿದ್ದರು. ಹಗ್ಗಜಗ್ಗಾಟ ಸ್ಪರ್ಧೆಗೆ ಬಜಪೆ ಯುವ ಟೈಗರ್‌ ತಂಡದ 7ಮಂದಿ ಆಗಮಿಸಿದ್ದು ಮೊದಲ ಸುತಿನಲ್ಲೇ ಸೋಲನುಭವಿಸಿದ್ದ ಯುವಕರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಸ್ಥಳೀಯರು ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಗಮನಿಸದೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಕ್ಕಿದ್ದಾರೆ.
ಯುವಕರು ಸಮುದ್ರಪಾಲಾಗುತ್ತಿದ್ದದ್ದನ್ನು ಗಮನಿಸಿದ ಪುಟ್ಟ ಮಗುವೊಂದು ಬೊಬ್ಬೆ ಹಾಕಿದ್ದು ಇದನ್ನು ಗಮನಿಸಿದ ಸ್ಥಳೀಯ ಗಂಗಾಂಧರ ಪುತ್ರನ್ ಸಾಹಸ ಮಾಡಿ ಇಬ್ಬರನ್ನು ರಕ್ಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com