ಕೇವಲ ನಾಲ್ಕೂವರೆ ವರ್ಷಗಳಲ್ಲಿ 15 ಕೆರೆಗಳು ಹೇಗೆ ಮಾಯವಾದವು?: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ

ಕೇವಲ ನಾಲ್ಕೂವರೆ ವರ್ಷಗಳಲ್ಲಿ ಬೆಂಗಳೂರಿನಲ್ಲಿದ್ದ 15 ಕೆರೆಗಳು ಮಾಯವಾಗಿದ್ದು ಹೇಗೆ?...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇವಲ ನಾಲ್ಕೂವರೆ ವರ್ಷಗಳಲ್ಲಿ ಬೆಂಗಳೂರಿನಲ್ಲಿದ್ದ 15 ಕೆರೆಗಳು ಮಾಯವಾಗಿದ್ದು ಹೇಗೆ?
ಈ ಪ್ರಶ್ನೆಯನ್ನು ಕೇಳಿದ್ದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ. ಬಿಬಿಎಂಪಿ ಬಳಿ 168 ಕೆರೆಗಳಿದ್ದವು, ಅವುಗಳಲ್ಲಿ 15 ಕೆರೆಗಳು ಮಾಯವಾಗಿದ್ದು ಅವುಗಳನ್ನು ಇಂದು ಬಸ್ ನಿಲ್ದಾಣ, ಸ್ಟೇಡಿಯಂ, ಕಚೇರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆಯ ಕ್ವಾರ್ಟರ್ಸ್, ಕೆಹೆಚ್ ಬಿ ಕಾಲೊನಿ ಮತ್ತು ಬಿಡಿಎ ಲೇ ಔಟ್ ಗಳ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ಕೋರ್ಟ್ ಗೆ ಜ್ಞಾಪನೆಯನ್ನು ಸಲ್ಲಿಸಿದರು.
ಹೀಗೆ ಸಲ್ಲಿಸಿದ ಜ್ಞಾಪನ ಪತ್ರದಿಂದ ಆತಂಕಗೊಳಗಾಗಿರುವ ರಾಜ್ಯ ಹೈಕೋರ್ಟ್ ಬಿಬಿಎಂಪಿ ತನ್ನ ವ್ಯಾಪ್ತಿಗೆ ಬರುವ ಕೆರೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಿಂದ ಲೆಕ್ಕ ಪರಿಶೋಧನೆಗೆ ಒಬ್ಬ ಆಡಿಟರ್ ನ್ನು ಏಕೆ ನೇಮಕ ಮಾಡುತ್ತಿಲ್ಲ. ಕೆರೆಗಳ ಪುನರುಜ್ಜೀವನ ಏಕೆ ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಬಿಡಿಎ ಲೇ ಔಟ್, ಶಾಲೆಗಳ ನಿರ್ಮಾಣ, ದೇವಸ್ಥಾನಗಳ ನಿರ್ಮಾಣ ಎಂದು ಕೆರೆಗಳನ್ನು ನೀವು ನಾಶ ಮಾಡುವ ಹಾಗಿಲ್ಲ. ಕೆರೆಗಳನ್ನು ನಾಶಮಾಡುವುದೆಂದರೆ ಸಂವಿಧಾನ ವಿಧಿ 21ನ್ನು ಉಲ್ಲಂಘಿಸಿದಂತೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
2014ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಹೇಳಿಕೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳಿದ್ದವು. ಆದರೆ ನಿನ್ನೆ ಸಲ್ಲಿಸಿದ ಹೇಳಿಕೆಯಲ್ಲಿ ಕೇವಲ ನಾಲ್ಕೂವರೆ ವರ್ಷಗಳಲ್ಲಿ 15 ಕೆರೆಗಳು ಮಾಯವಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com