ತಾಳಿ ಸರ ಕಿತ್ತು ಹಲ್ಲೆ, ಮನನೊಂದು ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!

ಪೊಲೀಸ್ ಠಾಣೆಯ ಮುಂದೆಯೇ ನಮ್ಮ ತಾಳಿ ಸರವನ್ನು ಕಿತ್ತುಕೊಂಡರು. ನನ್ನ ಪತಿಯನ್ನು ತೀವ್ರವಾಗಿ ಥಳಿಸಿದರು. ಮನೆ ಮಾಲೀಕ ಮತ್ತು ಪೊಲೀಸರ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಪೊಲೀಸ್ ಠಾಣೆಯ ಮುಂದೆಯೇ ನಮ್ಮ ತಾಳಿ ಸರವನ್ನು ಕಿತ್ತುಕೊಂಡರು. ನನ್ನ ಪತಿಯನ್ನು ತೀವ್ರವಾಗಿ ಥಳಿಸಿದರು. ಮನೆ ಮಾಲೀಕ ಮತ್ತು ಪೊಲೀಸರ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಮಹಿಳೆಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ 35 ವರ್ಷ ಮಂಜುಳಾ ನೇಣಿಗೆ ಶರಣಾದ ಮಹಿಳೆ. ಮನೆ ಬಾಡಿಗೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನಲೆಯಲ್ಲಿ ಮಾಲೀಕರು ಮಂಜುಳಾ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 
ಇನ್ನು ಪೊಲೀಸ್ ಠಾಣೆ ಮುಂದೆ ಮನೆ ಮಾಲೀಕ ಸೋಮಶೇಖರ್, ಗೀತಾ ಮತ್ತು ಬಿಂದು ಪೊಲೀಸರ ಮುಂದೆಯೇ ಮಂಜುಳಾ ಮತ್ತು ಪತಿ ಸುಬ್ರಮಣಿಗೆ ಥಳಿಸಿದ್ದರು. ಇದರಿಂದ ಮನನೊಂದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com