ರೌಡಿ ಕೋಳಿ ಪಯಾಜ್ ಪುತ್ರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರಿನ ಭೂಗತ ಜಗತ್ತನ್ನು ಆಳಿದ್ದ ಕುಖ್ಯಾತ ರೌಡಿ ಮೃತ ಕೋಳಿ ಫಯಾಜ್‌ ಪುತ್ರನ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ...
ಸಿಸಿಬಿ (ಸಂಗ್ರಹ ಚಿತ್ರ)
ಸಿಸಿಬಿ (ಸಂಗ್ರಹ ಚಿತ್ರ)
Updated on: 
ಬೆಂಗಳೂರು: ಬೆಂಗಳೂರಿನ ಭೂಗತ ಜಗತ್ತನ್ನು ಆಳಿದ್ದ ಕುಖ್ಯಾತ ರೌಡಿ ಮೃತ ಕೋಳಿ ಫಯಾಜ್‌ ಪುತ್ರನ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. 
ಅಮೀರ್‌ ಖಾನ್‌ ಅಲಿಯಾಸ್‌ ಪಪ್ಪು (34) ಗುಂಡು ತಿಂದವನು. ಈತ ಗಾಂಜಾ ವ್ಯಸನಿಯಾಗಿದ್ದಲ್ಲದೆ, ಶಿವಾಜಿನಗರ ಸುತ್ತಮುತ್ತಲ ಉದ್ಯಮಿಗಳನ್ನು ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುವ ಮೂಲಕ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ. ನ್ಯಾಯಾಲಯದಿಂದ ಹಲವು ಬಾರಿ ವಾರಂಟ್‌ ಜಾರಿಯಾದರೂ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ. 
ದರೋಡೆ, ಸುಲಿಗೆ, ಕೊಲೆ ಯತ್ನ, ಹಲ್ಲೆ ಸೇರಿ ಪಪ್ಪು ವಿರುದ್ಧ ನಗರದ ನಾನಾ ಪೊಲೀಸ್‌ ಠಾಣೆಗಳಲ್ಲಿ 22ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. 
ಈ ಹಿಂದೆ ಎರಡು ಕೊಲೆ ಪ್ರಕರಣದಲ್ಲೂ ಭಾಗಿಯಾಗಿ ಜೈಲು ಸೇರಿದ್ದ. ಶಿವಾಜಿನಗರ ಪೊಲೀಸರು ಈತನ ವಿರುದ್ಧ ರೌಡಿಪಟ್ಟಿ ತೆರೆದಿದ್ದರು. ಈತನ ಬಂಧನಕ್ಕೆ ಸಿಸಿಬಿ ತಂಡ ಸುತ್ತುವರಿದಾಗ ಅವರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಲಕ್ಷ್ಮೇಕಾಂತಯ್ಯ ಹಾರಿಸಿದ ಗುಂಡು ಆರೋಪಿಯ ಕಾಲು ಹೊಕ್ಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಈತನನ್ನು ಬಂಧಿಸಿದ ಸಿಸಿಬಿ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com