ರಾಜಿನಾಮೆ ನನ್ನ ಕೈಗೆ ಕೊಡಿ, ಸಿಎಂ ಎಚ್‌ಡಿಕೆ ಅಲ್ಲ, ಅವರಪ್ಪನೂ ನನ್ನ ಮಾತು ಕೇಳ್ತಾರೆ: ಪ್ರಸನ್ನಾನಂದ ಸ್ವಾಮೀಜಿ

ನಮ್ಮ ಸಮುದಾಯದ 17 ಶಾಸಕರಿದ್ದಾರೆ. ನೀವು ನನ್ನ ಕೈಗೆ ರಾಜಿನಾಮೆ ನೀಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ, ಅವರಪ್ಪನೂ ನನ್ನ ಮಾತು ಕೇಳೋ ಹಂಗೆ ಮಾಡುತ್ತೇನೆ ಎಂದು...
ಪ್ರಸನ್ನಾನಂದ ಸ್ವಾಮೀಜಿ
ಪ್ರಸನ್ನಾನಂದ ಸ್ವಾಮೀಜಿ
Updated on
ಬೆಂಗಳೂರು: ನಮ್ಮ ಸಮುದಾಯದ 17 ಶಾಸಕರಿದ್ದಾರೆ. ನೀವು ನನ್ನ ಕೈಗೆ ರಾಜಿನಾಮೆ ನೀಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ, ಅವರಪ್ಪನೂ ನನ್ನ ಮಾತು ಕೇಳೋ ಹಂಗೆ ಮಾಡುತ್ತೇನೆ ಎಂದು ವಾಲ್ಮಿಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ವಾಲ್ಮಿಕಿ ಸಮುದಾಯದ ಒಳಿತಿಗಾಗಿ ಪಕ್ಷಾತೀತವಾಗಿ ಶಾಸಕರು ರಾಜಿನಾಮೆ ನೀಡಬೇಕು. ಈ ರೀತಿ ಮಾಡಿದರೆ ಕುಮಾರಸ್ವಾಮಿಗೆ ಬುದ್ಧಿ ಬರುತ್ತದೆ. ತಮ್ಮ ಸಿಎಂ ಪದವಿಯನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಎಷ್ಟು ನಾಟಕ ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ.
ನಮ್ಮ ಶಾಸಕರಿಗೆ ಹೈಕಮಾಂಡ್ ಫೋನ್ ಮಾಡಲ್ಲ. ಆದರೆ ಕೈ ಶಾಸಕರಿಗೆ ಈ ಸಿಎಂ ಫೋನ್ ಮಾಡುತ್ತಾರೆ. ಫೋನ್ ಮಾಡಿ ಅಣ್ಣ ನಿಮಗೇನು ಬೇಕೆಂದು ಕೇಳುತ್ತಾರೆ. ನಿಮಗೇನು ಬೇಕೆಂದು ಕಾಲು ಬೇಕಾದರೂ ಹಿಡೀತಾರೆ. ನಮ್ಮ ಶಾಸಕರು ಒಟ್ಟಾಗಿ ಎಲ್ಲರೂ ರಾಜಿನಾಮೆ ನೀಡಿದರೆ ಕುಮಾರಸ್ವಾಮಿ ಅಲ್ಲ. ಅವರಪ್ಪನೂ ಮಾತು ಕೇಳುತ್ತಾರೆ ಎಂದು ಗುಡುಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com